ಇಂದು ಸುಪ್ರಸಿದ್ಧ ಜ್ಯೋತಿಷ್ಯಕಾರರು ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಿದ್ಧರೂ ಆಗಿರುವ ಜ್ಯೋತಿಷ್ಯ ರತ್ನ ಡಾ.ಬಸವರಾಜ ಗುರೂಜಿ ರವರ ಆಗಮನ

ಇಂದು ಸುಪ್ರಸಿದ್ಧ ಜ್ಯೋತಿಷ್ಯಕಾರರು ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಿದ್ಧರೂ ಆಗಿರುವ ಜ್ಯೋತಿಷ್ಯ ರತ್ನ ಡಾ.ಬಸವರಾಜ ಗುರೂಜಿ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರ ಆಶೀರ್ವಾದವನ್ನು ಪಡೆಯಲು ಆಗಮಿಸಿದ್ದರು. ಕಳೆದ 30 ವರ್ಷಗಳಿಂದ ಪೂಜ್ಯ ಜಪಾನಂದಜೀ ರವರ ಅನುಯಾಯಿಯಾಗಿ ಹಾಗೂ ದಿವ್ಯತ್ರ‍್ಯಯರ ಭಕ್ತರಾಗಿ ಶ್ರೀರಾಮಕೃಷ್ಣ ಮಠದ ಸಂರ‍್ಕ ಹೊಂದಿದ್ದು, ಪೂಜ್ಯ ಜಪಾನಂದಜೀ ರವರನ್ನು ಕಳೆದ ಮೂರು ದಶಕಗಳಿಂದ ಕಂಡಿದ್ದು, ಪೂಜ್ಯ ಸ್ವಾಮೀಜಿಯವರ ಸೇವಾ ಯೋಜನೆಗಳನ್ನು ಸಂಪೂರ್ಣವಾಗಿ  ಅರಿತವರಾಗಿದ್ದಾರೆ. ಇಂದು ಪೂಜ್ಯ ಸ್ವಾಮೀಜಿಯವರ ದರ್ಶನವನ್ನು ಪಡೆದು ಕೆಲವು ಗಂಟೆಗಳ ಕಾಲ ಸ್ವಾಮೀಜಿಯವರೊಂದಿಗೆ ಕಳೆದರು. ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಭೇಟಿ ನೀಡಿ ಕುಷ್ಠರೋಗಿಗಳು, ಕ್ಷಯರೋಗಿಗಳು ಹಾಗೂ ಅಂಧತ್ವ ಯೋಜನೆಗಳ ಅಡಿಯಲ್ಲಿ ಬರುವ ಪ್ರತಿಯೊಬ್ಬರನ್ನೂ ಕಂಡು ಮಾತನಾಡಿಸಿ ಸ್ವಾಮಿ ವಿವೇಕಾನಂದರ ಅತ್ಯಂತ ಪ್ರಸಿದ್ಧವಾದ ಸಂದೇಶ “ಆತ್ಮನೋ ಮೋಕ್ಷರ‍್ಥಂ ಜಗತ್ ಹಿತಾಯ ಚ” ಎಂಬ ಧ್ಯೇಯ ವಾಕ್ಯವನ್ನು ಆಹರ್ನಿಷಿ ಅನುಷ್ಠಾನರೂಪಕ್ಕೆ ತರಲು ತಮ್ಮನ್ನೇ ತಾವು ಸಮರ್ಪಿಸಿಕೊಂಡಿರುವ ಸೇವಾ ಸಂತರು ಎಂದು ಬಣ್ಣಿಸಿದರು. ತದನಂತರ ಆಶ್ರಮಕ್ಕೆ ಭೇಟಿ ನೀಡಿ ಪ್ರಾರ್ಥನ  ಮಂದಿರದಲ್ಲಿ ಕೆಲವು ಸಮಯ ಕಳೆದು ಪೂಜ್ಯ ಸ್ವಾಮೀಜಿಯವರ ಸುಮಧುರ ಕಂಠದಿಂದ ಭವತಾರಿಣಿಯ ಸಂಕೀರ್ತನೆಯನ್ನು  ಆಲಿಸಿ ಆನಂದಿಸಿದರು. ಅವರ ಭಾಷೆಯಲ್ಲೇ ತಿಳಿಸಬೇಕೆಂದರೆ “ತಮ್ಮನ್ನು ಯಾವುದೋ ದಿವ್ಯ ಲೋಕಕ್ಕೆ ಕರೆದೊಯ್ಯಲಾಗಿದೆ” ಎಂಬ ಭಾವನೆಯಿಂದ ಪೂಜ್ಯ ಸ್ವಾಮೀಜಿಯವರಿಗೆ ಭಕ್ತಿ ಪೂರ್ವಕ  ನಮನವನ್ನು ಸಲ್ಲಿಸಿ ಗೌರವಿಸಿದರು. ಆಶ್ರಮದ ಪರವಾಗಿ ಶ್ರೀ ಬಸವರಾಜ ಗುರೂಜಿ ರವರಿಗೆ ಗೌರವ ಹಾಗೂ ಶಾಲು ಹೊದಿಸಿ ಅವರಿಗೆ ಶುಭವನ್ನು ಕೋರಿದರು, ಪೂಜ್ಯ ಸ್ವಾಮಿ ಜಪಾನಂದಜೀ ರವರು. ಆಶ್ರಮದ ಆಡಳಿತ ವರ್ಗದವರು  ಹಾಗೂ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಮ್ಮ ಮಹದಾಸೆಯನ್ನು ಇಂದು ಪೂರೈಸಿಕೊಂಡ ಎಂಬ ಧನ್ಯತಾ ಭಾವನೆಯಿಂದ ಹಾಗೂ ಅತ್ಯಂತ ಭಾವುಕರಾಗಿ ಪೂಜ್ಯ ಸ್ವಾಮೀಜಿಯವರಿಗೆ ಮತ್ತೆ ಮತ್ತೆ ನಮಸ್ಕರಿಸಿ ತೆರಳಿದರು. ಒಟ್ಟಿನಲ್ಲಿ ಒಬ್ಬ ಮಹಾನ್ ಭಕ್ತ, ಹಿತೈಷಿ ಎಲ್ಲದಕ್ಕಿಂತ ಮಿಗಿಲಾಗಿ ದಿವ್ಯತ್ರ‍್ಯಯರ ಸಂದೇಶಗಳನ್ನು ಸಂಪೂರ್ಣವಾಗಿ  ನಂಬಿ ತನ್ನನ್ನೇ ತಾನು ಜ್ಯೋತಿಷ್ಯ ವಲಯದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಛಾಪನ್ನು ಮೂಡಿಸಿರುವಂತಹ ಶ್ರೀ ಬಸವರಾಜ ಗುರೂಜಿ ರವರು ಪೂಜ್ಯ ಸ್ವಾಮೀಜಿಯವರ ಅನುಯಾಯಿ ಹಾಗೂ ಶಿಷ್ಯನಾಗಿದ್ದು ಮುಂದೆಯೂ ಸಹ ತಮ್ಮ ಸಹಕಾರ ಹಾಗೂ ಬೆಂಬಲವನ್ನು ನೀಡುತ್ತೇನೆಂದು ಭಾವುಕರಾಗಿ ಪೂಜ್ಯ ಸ್ವಾಮೀಜಿಯವರಲ್ಲಿ ವಿನಮ್ರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ  ಸರಿಸುಮಾರು 250ಕ್ಕೂ ಮಿಗಿಲಾದ ಗೋಪಾಲಕರು ಹಾಗೂ ರೈತಾಪಿ ಜನರು ತಮ್ಮ ನಿತ್ಯ ಮೇವನ್ನು ಸ್ವೀಕರಿಸಲು ಬಂದ ಸಂದರ್ಭದಲ್ಲಿ ಶ್ರೀ ಗುರೂಜಿ ರವರು ಅವರಿಗೆ ಮೇವನ್ನು ವಿತರಿಸಿದ ಕ್ಷಣ ನಿಜಕ್ಕೂ ಅದ್ಭುತವಾಗಿತ್ತು. ಸ್ವಾಮೀಜಿಯವರ ಸೇವಾ ಕಾರ್ಯಗಳಲ್ಲಿ  ತಾವು ಮುಂದೆಯೂ ಸಹ ಭಾಗಿಗಳಾಗುತ್ತೇವೆಂದು ಶ್ರೀ ಶ್ರೀ ಬಸವರಾಜ ಗುರೂಜಿರವರು ತಿಳಿಸಿದರು.

You May Also Like