ಮೊದಲ ಎರಡು ಪಟ್ಟಿ ಬಿಡುಗಡೆಗೊಳಿಸಿರುವ ಕಾಂಗ್ರೆಸ್, ಬಿಜೆಪಿ ಲಿಸ್ಟ್ಗೆ ಕಾಯುತ್ತಿದೆ. ಇತ್ತ ಜೆಡಿಎಸ್ ಸಹ ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ವಂಚಿತರನ್ನು ಸೆಳೆಯಲು ಪ್ಲಾನ್ ಮಾಡುತ್ತಿದೆ. ಚುನಾವಣೆಗೆ ಸಂಬಂಧಿಸಿದ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಬೆಂಗಳೂರು: ಬಿಜೆಪಿಯಲ್ಲಿ (BJP) ವಿಧಾನಸಭಾ ಚುನಾವಣೆಗೆ (Assembly Election 2023) ಅಭ್ಯರ್ಥಿಯನ್ನು ಆಯ್ಕೆ (Candidate Selection) ಮಾಡುವ ಪ್ರಕ್ರಿಯೆ ಕಗ್ಗಾಂಟಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಳೆದು ತೂಗಿ ಅಂತಿಮಗೊಳಿಸಲಾಗುತ್ತಿದೆ. ಇತ್ತ ಬಾಕಿ ಉಳಿದಿರುವ 58 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಲು ದೆಹಲಿಯಲ್ಲಿ ಕಾಂಗ್ರೆಸ್ (Congress) ಚರ್ಚೆ ಮುಂದುವರಿದಿದೆ. ಇನ್ನೂ ಜೆಡಿಎಸ್ನಲ್ಲಿ (JDS) ಹಾಸನದ ಟಿಕೆಟ್ ಫೈಟ್ ಅಂತಿಮ ಹಂತಕ್ಕೆ ತಲುಪಿದೆ.