ಜಾತಿ/ಧರ್ಮ/ಸಮುದಾಯಗಳ ಹೆಸರಿನಲ್ಲಿ ಸಮಾರಂಭ ಏರ್ಪಡಿಸುವಂತಿಲ್ಲ-ಡೀಸಿ

Necessary precautionary measures to control COVID-19: DC

ತುಮಕೂರು: ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯನ್ವಯ ಯಾವುದೇ ಜಾತಿ/ಧರ್ಮ/ಸಮುದಾಯಗಳ ಹೆಸರಿನಲ್ಲಿ ಸಮಾವೇಶ/ ಸಮಾರಂಭ ಏರ್ಪಡಿಸಲು ಯಾವುದೇ ಪಕ್ಷ/ಅಭ್ಯರ್ಥಿಗಳಿಗೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತಮ್ಮ ಕಚೇರಿಯಲ್ಲಿ  ಪತ್ರಿಕಾ ಹೇಳಿಕೆ ನೀಡಿದ ಅವರು, ಪಕ್ಷದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗುವುದು. ಜಾತ್ರೆ/ ಉತ್ಸವ/ ಇಫ್ತಿಯಾರ್ ಕೂಟ ನಡೆಯುವ ಸಂದರ್ಭದಲ್ಲಿ ಅನುಮತಿ ನೀಡುವಾಗ ನೀತಿ ಸಂಹಿತೆ ಉಲ್ಲಂಘನೆಯಾಗದ0ತೆ ನಿಯಮಗಳನ್ನು ಪಾಲಿಸುವ ಬಗ್ಗೆ ಷರತ್ತುಗಳನ್ನು ವಿಧಿಸಲಾಗುವುದು. ಧಾರ್ಮಿಕ ಕಾರ್ಯಗಳಿಗೆ ಸಂಬ0ಧಿಸಿದ0ತೆ ದೇವಾಲಯ/ ಮಸೀದಿ/ ಚರ್ಚ್ಗಳಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದ್ದಲ್ಲಿ ದೇವಾಲಯ/ ಮಸೀದಿ/ ಚರ್ಚ್ನ ಮುಖ್ಯಸ್ಥರು ಅನ್ನ ದಾಸೋಹ ನಡೆಸಲು ಅವಕಾಶವಿದೆ. ಆದರೆ ಸಂಭಾವ್ಯ ಚುನಾವಣಾ ಅಭ್ಯರ್ಥಿಗಳು ಜಾತ್ರೆ ಸಂದರ್ಭದಲ್ಲಿ ಆಮಿಷಗಳಿಗೆ ಒಳಗಾಗುವಂತೆ ಮತದಾರರನ್ನು ಸೆಳೆಯಲು ಅನ್ನದಾಸೋಹ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಹಂಚುವ ಪ್ರಯತ್ನ ಮಾಡುವಂತಿಲ್ಲ ಎಂದು ತಿಳಿಸಿದರಲ್ಲದೆ ಯಾವುದೇ ರಾಜಕೀಯ ಪಕ್ಷದ ಸಭೆ/ ಸಮಾರಂಭವನ್ನು ಶಾಲಾ ಆವರಣದಲ್ಲಿ ನಡೆಸಲು ಮನವಿ ಬಂದಾಗ ಶಾಲಾ ತರಗತಿ ನಡೆಯದಿರುವ ಸಮಯದಲ್ಲಿ ಆಯೋಜಿಸಲು ಅನುಮತಿ ನೀಡಲಾಗುವುದು. ಆದರೆ ಶಾಲಾ ಕೊಠಡಿಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ/ ಸಮಾರಂಭವನ್ನು ನಡೆಸಲು ಅವಕಾಶವಿಲ್ಲವೆಂದು ತಿಳಿಸಿದರು.

You May Also Like