ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 52 ಮಂದಿ ಹೊಸಬರಿಗೆ ಮಣೆ

Here's what BJP is going to tweet today: Toolkit for Modi's Telangana visit  exposed - Telangana Today

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

52 ಹೊಸ ಮುಖಗಳಿಗೆ ಮಣೆ

ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್​ ನೀಡಿದೆ. ಒಬಿಸಿಯ 32 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಒಬಿಸಿ 32, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.

BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಯಾರಿಗೆಲ್ಲ ಬಿಜೆಪಿ ಟಿಕೆಟ್? ಇಲ್ಲಿದೆ ಮಾಹಿತಿ

ಕ್ಷೇತ್ರ – ಅಭ್ಯರ್ಥಿ

ಶಿಗ್ಗಾಂವಿ ಕ್ಷೇತ್ರ – ಬಸವರಾಜ ಬೊಮ್ಮಾಯಿ

ನಿಪ್ಪಾಣಿ – ಶಶಿಕಲಾ ಜೊಲ್ಲೆ

ಚಿಕ್ಕೋಡಿ – ರಮೇಶ್ ಕತ್ತಿ

ಅಥಣಿ – ಮಹೇಶ್ ಕುಮಟಳ್ಳಿ

ಕುಡಚಿ (ಮೀಸಲು ಕ್ಷೇತ್ರ SC) – ಪಿ.ರಾಜೀವ್

ರಾಯಬಾಗ – ದುರ್ಯೋಧನ ಐಹೊಳೆ

ಹುಕ್ಕೇರಿ – ನಿಖಿಲ್ ಕತ್ತಿ

ಅರಬಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ್ – ರಮೇಶ್ ಜಾರಕಿಹೊಳಿ

ಬೆಳಗಾವಿ ಗ್ರಾಮಾಂತರ – ನಾಗೇಶ್

ಕಿತ್ತೂರು -ಮಹಾಂತೇಶ್ ದೊಡಗೌಡರ್​

ಬೈಲಹೊಂಗಲ – ಜಗದೀಶ್ ಮೆಟಗುಡ್ಡ

ಸವದತ್ತಿ ಯಲ್ಲಮ್ಮ – ರತ್ನಾ ಮಾಮನಿ

ರಾಮದುರ್ಗ – ಚಿಕ್ಕರೇವಣ್ಣ

ಮುಧೋಳ – ಗೋವಿಂದ ಕಾರಜೋಳ

ಬೆಳಗಾವಿ ಉತ್ತರ  – ರವಿ ಪಾಟೀಲ

ಬೆಳಗಾವಿ ದಕ್ಷಿಣ – ಅಭಯ್

ಬೆಳಗಾವಿ ಗ್ರಾ – ನಾಗೇಶ್

ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್

ವಿಜಯನಗರ – ಸಿದ್ದಾರ್ಥ್ ಸಿಂಗ್​

ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು

ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ

ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ

ಶಿಕಾರಿಪುರ – ಬಿ.ವೈ.ವಿಜಯೇಂದ್ರ

ಉಡುಪಿ – ಯಶ್​ಪಾಲ್​​ ಸುವರ್ಣ

ಕಾರ್ಕಳ – ವಿ.ಸುನೀಲ್ ಕುಮಾರ್​

ಚಿಕ್ಕಮಗಳೂರು – ಸಿ.ಟಿ.ರವಿ

ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ

ತಿಪಟೂರು – ಬಿ.ಸಿ.ನಾಗೇಶ್

ತುಮಕೂರು – ಜ್ಯೋತಿ ಗಣೇಶ್

ಕೊರಟಗೆರೆ – ಅನಿಲ್ ಕುಮಾರ್(ನಿವೃತ್ತ ಐಎಎಸ್ ಅಧಿಕಾರಿ)

ಅಫಜಲಪುರ-ಮಾಲೀಕಯ್ಯ ಗುತ್ತೇದಾರ್​

ಕಲಬುರಗಿ ಗ್ರಾಮಾಂತರ (ಎಸ್‌ಸಿ)- ಬಸವರಾಜ ಮತ್ತಿಮೂಡ

ಕಲಬುರಗಿ.ದ – ದತ್ತಾತೇಯ ಪಾಟೀಲ್ ರೇವೂರ

ಕಲಬುರಗಿ.ಉ – ಚಂದ್ರಕಾಂತ ಪಾಟೀಲ್

ಚಿಂಚೋಳಿ – ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)- ಬಸವರಾಜ ಮತ್ತಿಮೂಡ

ಅಳಂದ-ಸುಭಾಷ್ ಗುತ್ತೇದಾರ್

ಔರಾದ್ – ಪ್ರಭು ಚೌಹಾಣ್​

ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್​

ರಾಯಚೂರು-ಶಿವರಾಜ ಪಾಟೀಲ್

ಸಿಂಧನೂರು – ಕೆ.ಕರಿಯಪ್ಪ

ಮಸ್ಕಿ – ಪ್ರತಾಪಗೌಡ ಪಾಟೀಲ್

ಕನಕಗಿರಿ – ಬಸವರಾಜ ದಡೇಸುಗೂರು

ನರಗುಂದ – ಶಂಕರ ಪಾಟೀಲ್​

ಧಾರವಾಡ – ಅಮೃತ ದೇಸಾಯಿ

ಹಳಿಯಾಳ – ಸುನೀಲ್ ಹೆಗಡೆ

ಕಾರವಾರ  -ರೂಪಾಲಿ ನಾಯ್ಕ್​

ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

ವಿಜಯಪುರ – ಬಸನಗೌಡ ಪಾಟೀಲ್ ಯತ್ನಾಳ್

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್​​

ಕೋಲಾರ – ವರ್ತೂರು ಪ್ರಕಾಶ್

ಯಲಹಂಕ – ಎಸ್.ಆರ್.ವಿಶ್ವನಾಥ್

ಕೆ.ಆರ್.ಪುರಂ – ಭೈರತಿ ಬಸವರಾಜು

ಯಶವಂತಪುರ – ಎಸ್.ಟಿ.ಸೋಮಶೇಖರ್

ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡು

ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ

ಮಲ್ಲೇಶ್ವರ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ

ಗಾಂಧಿನಗರ – ಸಪ್ತಗಿರಿಗೌಡ

ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ IPS ಅಧಿಕಾರಿ)

ಬಸವಗುಡಿ – ರವಿ ಸುಬ್ರಹ್ಮಣ್ಯ

ಪದ್ಮನಾಭನಗರ – ಆರ್.ಅಶೋಕ್​

ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್

ಹೊಸಕೋಟೆ – ಎಂಟಿಬಿ ನಾಗರಾಜ್

ರಾಜಾಜಿನಗರ – ಎಸ್.ಸುರೇಶ್ ಕುಮಾರ್​

ಕನಕಪುರ – ಆರ್.ಅಶೋಕ್​

ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್​

ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ

ಹಾಸನ – ಪ್ರೀತಂ ಗೌಡ

ಚಾಮರಾಜನಗರ – ವಿ. ಸೋಮಣ್ಣ

ವರುಣಾ – ವಿ. ಸೋಮಣ್ಣ

ಬೆಳ್ತಂಗಡಿ – ಹರೀಶ್ ಪೂಂಜಾ

ಬಂಟ್ವಾಳ – ರಾಜೇಶ್ ನಾಯಕ್​

ಪುತ್ತೂರು – ಆಶಾ ತಿಮ್ಮಪ್ಪ

ಮಡಿಕೇರಿ – ಅಪ್ಪಚ್ಚು ರಂಜನ್

ವಿರಾಜಪೇಟೆ – ಕೆ.ಜಿ.ಬೋಪಯ್ಯ

ನಂಜನಗೂಡು – ಡಾ. ಹರ್ಷವರ್ಧನ್​

ಹನೂರು – ಡಾ. ಪ್ರೀತನ್ ನಾಗಪ್ಪ

ಕಾಗವಾಡ – ಶ್ರೀಮಂತ ಬಾಳಾಸಾಹೇಬ್ ಪಾಟೀಲ್

ಮುದ್ದೆಬಿಹಾಳ – ಎಎಸ್ ಪಾಟೀಲ್ ನಡಹಳ್ಳಿ

ರಾಯಭಾಗ – ದುರ್ಯೋಧನ್ ಮಹಾಲಿಂಗಪ್ಪ ಐಹೊಳೆ

ಯಮಕನಮರಡಿ – ಬಸವರಾಜ್ ಹುಂಡ್ರಿ

ಖಾನಾಪುರ ಕ್ಷೇತ್ರ – ವಿಠ್ಠಲ್​ ಹಲಗೇಕರ್​

ಚಿಕ್ಕಪೇಟೆ – ಉದಯ ಗರುಡಾಚಾರ್

ಆನೇಕಲ್ – ಹುಲ್ಲಳ್ಳಿ ಶ್ರೀನಿವಾಶ್

ಹೊಸಕೋಟೆ – ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ – ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು

ನೆಲಮಂಗಲ – ಸಪ್ತಗಿರಿ ನಾಯ್ಕ್

ಮಾಗಡಿ – ಪ್ರಸಾದ್ ಗೌಡ

ರಾಮನಗರ – ಗೌತಮಗೌಡ

‌ಚನ್ನಪಟ್ಟಣ – ಸಿ.ಪಿ. ಯೋಗೇಶ್ವರ್

ಮಳವಳ್ಳಿ – ಮುನಿರಾಜು

ಮದ್ದೂರು – ಎಸ್.ಪಿ. ಸ್ವಾಮಿ

ಮೇಲುಕೋಟೆ – ಇಂದ್ರೇಶ್ ಕುಮಾರ್

ಮಂಡ್ಯ – ಅಶೋಕ ಜಯರಾಂ

ಶ್ರೀರಂಗಪಟ್ಟಣ – ಇಂಡವಾಳು ಸಚ್ಚಿದಾನಂದ

ನಾಗಮಂಗಲ – ಸುಧಾ ಶಿವರಾಂ

ಕೆ.ಆರ್. ಪೇಟೆ – ಕೆ.ಸಿ. ನಾರಾಯಣಗೌಡ

ಬೇಲೂರು – ಉಳ್ಳಳ್ಳಿ ಸುರೇಶ್

‌ಹೊಳೆನರಸೀಪುರ – ದೇವರಾಜೇಗೌಡ

ಅರಕಲಗೂಡು – ಯೋಗಾ ರಮೇಶ್

ಸಕಲೇಶ ‍ಪುರ – ಸಿಮೆಂಟ್ ಮಂಜು

ಮೂಡಬಿದರೆ – ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ – ಭರತ್ ಶೆಟ್ಟಿ

ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್

‌ಮಂಗಳೂರು – ಸತೀಶ್ ಕುಂಪಲ

ಸುಳ್ಯ – ಭಾಗೀರಥಿ ಮುರುಲ್ಯ

ಮಡಿಕೇರಿ – ಅಪ್ಚಚ್ಚು ರಂಜನ್

ವಿರಾಜಪೇಟೆ – ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ – ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ – ವೆಂಕಟೇಶ್ ಹೊಸಳ್ಳಿ

‌ಹುಣಸೂರು – ದೇವರಹಳ್ಳಿ ಸೋಮಶೇಖರ್

ನಂಜನಗೂಡು – ಬಿ. ಹರ್ಷವರ್ಧನ

ಚಾಮುಂಡೇಶ್ವರಿ – ಕವೀಶ್ ಗೌಡ

ನರಸಿಂಹರಾಜ – ಸಂದೇಶ ಸ್ವಾಮಿ

ಟಿ. ನರಸೀಪುರ – ರೇವಣ್ಣ

ಹನೂರು – ಪ್ರೀತಂ ನಾಗಪ್ಪ

ಕೊಳ್ಳೇಗಾಲ – ಎನ್. ಮಹೇಶ್

ಗುಂಡ್ಲುಪೇಟೆ – ಸಿ.ಎಸ್. ನಿರಂಜನಕುಮಾರ್

ಕುಂದಾಪುರ – ಕಿರಣ್​ ಕುಮಾರ್ ಕೊಡ್ಗಿ

ಸಾಗರ – ಹರತಾಳು ಹಾಲಪ್ಪ

ಯಲ್ಲಾಪುರ – ಶಿವರಾಂ ಹೆಬ್ಬಾರ್‌

ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು – ಬಿ.ಸಿ. ಪಾಟೀಲ

ರಾಣೆಬೆನ್ನೂರು – ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ) – ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ) – ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ) – ಎಂ.ಎಸ್‌. ಸೋಮಲಿಂಗಪ್ಪ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ) – ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ) – ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ) – ಅನಿಲ್‌ ಕುಮಾರ್‌

ಚಿತ್ರದುರ್ಗ – ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ) – ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ) – ಎಸ್‌.ವಿ. ರಾಮಚಂದ್ರ

ಹರಿಹರ – ಬಿ.ಪಿ. ಹರೀಶ್‌

ಹೊನ್ನಾಳಿ- ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ) – ಅಶೋಕ್‌ ನಾಯ್ಕ್‌

ಭದ್ರಾವತಿ – ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ – ಆರಗ ಜ್ಞಾನೇಂದ್ರ

ಶಿಕಾರಿಪುರ – ಬಿ.ವೈ. ವಿಜಯೇಂದ್ರ

ಸೊರಬ – ಕುಮಾರ್‌ ಬಂಗಾರಪ್ಪ

ಕಾಪು – ಗುರ್ಮೆ ಸುರೇಶ್‌ ಶೆಟ್ಟಿ

ಸುರಪುರ (ಎಸ್‌ಟಿ) – ನರಸಿಂಹ ನಾಯಕ (ರಾಜೂ ಗೌಡ)

ಶಹಾಪುರ – ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್​ಸಿ) – ಮಣಿಕಂಠ ರಾಠೋಡ್‌

ಬಿಟಿಎಂ ಲೇಔಟ್ – ಶ್ರೀಧರ ರೆಡ್ಡಿ

ಜಯನಗರ – ಸಿ.ಕೆ.ರಾಮಮೂರ್ತಿ

ಬೊಮ್ಮನಹಳ್ಳಿ – ಸತೀಶ್ ರೆಡ್ಡಿ

ಶಾಂತಿನಗರ – ಶಿವಕುಮಾರ್​

ಶಿವಾಜಿನಗರ – ಎನ್.ಚಂದ್ರ

ಯಲಹಂಕ – ಎಸ್.ಆರ್.ವಿಶ್ವನಾಥ್

ಬ್ಯಾಟರಾಯನಪುರ – ತಿಮ್ಮೇಶ್ ಗೌಡ

ಯಶವಂತಪುರ – ಎಸ್.ಟಿ.ಸೋಮಶೇಖರ್​

ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡು

ದಾಸರಹಳ್ಳಿ – ಎಸ್.ಮುನಿರಾಜು

ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ

ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ

ಪುಲಿಕೇಶಿನಗರ ಮೀಸಲು ಕ್ಷೇತ್ರ (SC)- ಮುರಳಿ

ಸರ್ವಜ್ಞನಗರ ಕ್ಷೇತ್ರ – ಪದ್ಮನಾಭರೆಡ್ಡಿ

ಸಿ.ವಿ.ರಾಮನ್​ನಗರ ಮೀಸಲು ಕ್ಷೇತ್ರ (SC)- ಎಸ್.ರಘು

ಸಿದ್ದರಾಮಯ್ಯ vs ಸೋಮಣ್ಣ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನಾಗಿ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಜತೆಗೆ ಚಾಮರಾಜನಗರ ಕ್ಷೇತ್ರದಿಂದಲೂ ಸೋಮಣ್ಣಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಡಿಕೆ ಶಿವಕುಮಾರ್ vs ಆರ್ ಅಶೋಕ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕನಕಪುರ ಕ್ಷೇತ್ರದಲ್ಲಿ ಆರ್. ಅಶೋಕ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದರೊಂದಿಗೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಿಬ್ಬರ ನಡುವೆ ಪೈಪೋಟಿ ಏರ್ಪಡಲಿದೆ. ಮತ್ತೊಂದೆಡೆ ಪದ್ಮನಾಭನಗರ ಕ್ಷೇತ್ರದಿಂದಲೂ ಅಶೋಕ್​ಗೆ ಟಿಕೆಟ್ ನೀಡಲಾಗಿದೆ.

ಪಟ್ಟಿ ಬಿಡುಗಡೆ ಸುಳಿವು ನೀಡಿದ್ದ ಬೊಮ್ಮಾಯಿ, ಬಿಎಸ್​ವೈ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದು ಹೈಕಮಾಂಡ್ ಜತೆ ಹಲವು ಸುತ್ತಿನ ಸಭೆಗಳಲ್ಲಿ ಭಾಗಿಯಾಗಿದ್ದರು. ಮಂಗಳವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಹೊರಡುವ ಮುಂಚೆ, ಪಟ್ಟಿ ಇಂದೇ ಬಿಡುಗಡೆಯಾಗಲಿದೆ. ಎರಡು ಹಂತಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ, ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಕೂಡ ದೆಹಲಿಯಲ್ಲಿದ್ದು ಸಭೆಗಳಲ್ಲಿ ಭಾಗಿಯಾಗಿದ್ದರು. ಆದರೆ, ಸೋಮವಾರ ನಡೆದ ಕೆಲವು ಸಭೆಗಳಲ್ಲಿ ಅವರು ಭಾಗವಹಿಸಿರಲಿಲ್ಲ. ಸೋಮವಾರ ಸಂಜೆ ಅವರು ವಾಪಸಾಗಿದ್ದರು. ಯಡಿಯೂರಪ್ಪ ಅವರನ್ನು ಕೆಲವು ಸಭೆಗಳಿಂದ ಹೊರಗಿಟ್ಟಿದ್ದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಸಭೆ ನಡೆಯುತ್ತಿರುವ ಪ್ರದೇಶ ಬೇರೆಯಾದದ್ದರಿಂದ ಅಲ್ಲಿಗೆ ತೆರಳಿಲ್ಲ. ಇದರ ಹೊರತು ಬೇರೆ ಕಾರಣಗಳಿಲ್ಲ. ಯಾವುದೇ ಅಸಮಾಧಾನ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು.

You May Also Like