ನೇರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ನಂ.3, ನಗರಗಳಲ್ಲೂ ಬೆಂಗಳೂರಿಗೆ 3ನೇ ಸ್ಥಾನ

When are gifts received by NRIs subject to tax, TDS in India? - The  Economic Times

ಕಳೆದ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ 1.7 ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹವಾಗಿದ್ದು, ಮಹಾರಾಷ್ಟ್ರ ಹಾಗೂ ದಿಲ್ಲಿ ನಂತರದ ಸ್ಥಾನದಲ್ಲಿ ರಾಜ್ಯವಿದೆ.

  • ಕಳೆದ ಆರ್ಥಿಕ ವರ್ಷದಲ್ಲಿ ಕರ್ನಾಟಕದಲ್ಲಿ 1.7 ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹ
  • ದೇಶದಲ್ಲಿಯೇ ಅತಿ ಹೆಚ್ಚು ನೇರ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ
  • ಮಹಾರಾಷ್ಟ್ರ ಹಾಗೂ ದಿಲ್ಲಿ ನಂತರದ ಸ್ಥಾನದಲ್ಲಿದೆ ಕರ್ನಾಟಕ
  • ಕರ್ನಾಟಕದಲ್ಲಿ 1.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ
ಹೊಸದಿಲ್ಲಿ: ದೇಶದಲ್ಲಿಯೇ ಅತಿ ಹೆಚ್ಚು ನೇರ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ರಾಜಧಾನಿ ದಿಲ್ಲಿ ಎರಡನೇ ಸ್ಥಾನದಲ್ಲಿವೆ. ಅಲ್ಲದೇ, ಹೆಚ್ಚು ನೇರ ತೆರಿಗೆ ಸಂಗ್ರಹಿಸಿದ ದೇಶದ ನಗರಗಳ ಪೈಕಿಯೂ ರಾಜ್ಯ ರಾಜಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಆದಾಯ ತೆರಿಗೆ ಹಾಗೂ ಕಾರ್ಪೊರೇಟ್‌ ತೆರಿಗೆಯನ್ನು ಒಳಗೊಂಡಿರುವ ನೇರ ತೆರಿಗೆಯು ದೇಶದಲ್ಲಿ ಕಳೆದ ವರ್ಷ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷ ಅಂದರೆ 2022-23ರಲ್ಲಿ ದೇಶದಲ್ಲಿಒಟ್ಟು 19.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. 2013-14ಕ್ಕೆ ಹೋಲಿಸಿದರೆ ಇದು ಶೇ. 173 ರಷ್ಟು ಹೆಚ್ಚಾಗಿದೆ.
ಮರುಪಾವತಿಯ ನಂತರ ಕೇಂದ್ರ ಸರಕಾರವು 16.61 ಲಕ್ಷ ಕೋಟಿ ರೂ.ಗಳಷ್ಟು ನೇರ ತೆರಿಗೆಯನ್ನು ಸಂಗ್ರಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.63ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕೇಂದ್ರ ಬಜೆಟ್ ಅಂದಾಜಿಗಿಂತ 2.41 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ನೇರ ತೆರಿಗೆ ಸಂಗ್ರಹಿಸಿದ್ದರೆ, ಪರಿಷ್ಕೃತ ಅಂದಾಜಿಗಿಂತ 11,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹಿಸಿದೆ.

You May Also Like