ಇಡೀ ರಾಜ್ಯದಲ್ಲಿಯೇ ಏಕೈಕ ಅಂಗವಿಕಲತೆಯ ಪುನರ್ ಜೋಡಣಾ ಶಸ್ತ್ರ ಚಿಕಿತ್ಸಾ ಕೇಂದ್ರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಎಂಬುದು ನಾಡಿಗೆ ತಿಳಿದಿರುವ ಅಂಶ. ಈ ಕೇಂದ್ರದಿಂದ ಈಗಾಗಲೇ ಸರಿಸುಮಾರು 601 ಜನರಿಗೆ ಸಂಪೂರ್ಣ ಉಚಿತವಾಗಿ ಅಂಗವಿಕಲತೆಯ ಪುನರ್ ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ನಡೆಸುತ್ತಾ ಬಂದಿರುತ್ತೇವೆ. ಪ್ರತಿಯೊಂದು ಶಸ್ತ್ರ ಚಿಕಿತ್ಸೆಗೆ ಸರಿಸುಮಾರು ಒಂದೂವರೆ ಲಕ್ಷಕ್ಕೂ ಮೀರಿ ವೆಚ್ಚವಾಗುತ್ತದೆ. ಇದಲ್ಲದೆ ಎರಡು ತಿಂಗಳು ಸಂಪೂರ್ಣ ಶಸ್ತ್ರ ಚಿಕಿತ್ಸೆಯ ನಂತರದ ಫಿಜಿಯೋಥೆರಪಿ ಹಾಗೂ ಔಷಧೋಪಚಾರಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ರೋಗಿಯು ಹಾಗೂ ಅವರ ಸಹಚರರಿಗೆ ಊಟ, ವಸತಿ ಇತ್ಯಾದಿಗಳನ್ನೂ ಸಹ ಏರ್ಪಾಡು ಮಾಡಲಾಗಿದ್ದು ಕಳೆದ ಎರಡೂವರೆ ದಶಕಗಳಿಂದ ಈ ಯೋಜನೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಯೋಜನೆಗೆ ದೂರದ ಆಂಧ್ರಪ್ರದೇಶ, ಬಳ್ಳಾರಿ, ಕೊಪ್ಪಳ, ಗುಲ್ಬರ್ಗಾ, ರಾಯಚೂರು, ಚಾಮರಾಜನಗರ, ಮೈಸೂರು, ತುಮಕೂರು, ಬೀದರ್ ಮುಂತಾದ ಪ್ರದೇಶಗಳಿಂದ ಅಂಗವಿಕಲತೆಯನ್ನು ಹೊಂದಿರುವ ಕುಷ್ಠರೋಗ ಮುಕ್ತ ಜನರು ಪ್ರತಿ ಎರಡು ತಿಂಗಳಿಗೊಮ್ಮೆ ಈ ಸಂಸ್ಥೆಗೆ ಬಂದು ಶಸ್ತ್ರ ಚಿಕಿತ್ಸೆಗಳನ್ನು ಹಾಗೂ ಇತರ ಔಷಧೋಪಚಾರಗಳನ್ನು ಪಡೆಯುತ್ತಿದ್ದಾರೆ. ಇಂದು ಅಂತಹ ಒಂದು ತಂಡ ಎರಡು ತಿಂಗಳಿನ ನಂತರ ತಮ್ಮ ತಮ್ಮ ಊರುಗಳಿಗೆ ಸಂತೋಷದಿಂದ ತೆರಳಿದರು. ಅವರಿಗೆ ನೂತನ ವಸ್ತ್ರ, ದಿನಸಿ ಚೀಲ ಹಾಗೂ ಹಣ ಸಹಾಯವನ್ನೂ ಸಹ ಮಾಡಲಾಗುತ್ತಿದೆ. ಈ ಯೋಜನೆಯು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಪರಮಪೂಜ್ಯ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ನಾಡಿನ ಸುಪ್ರಸಿದ್ಧ ಕೀಲು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಪ್ರಮೋದ್ ಎಂ (ಮಣಿಪಾಲ ಆಸ್ಪತ್ರೆ, ಬೆಂಗಳೂರು) ರವರ ಸಹಕಾರದಿಂದ ಡಾ.ಚಂದ್ರಕಲಾ, ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಅಂಗವಿಕಲತೆಯ ಪುನರ್ ಜೋಡಣಾ ತಜ್ಞರು ಮತ್ತು ಶ್ರೀ ಪೀಟರ್ ಪಾಲ್, ಹಿರಿಯ ಕೀಲು ಮತ್ತು ಮೂಳೆ ತಜ್ಞರು ಹಾಗೂ ಪುನರ್ವಸತಿ ತಜ್ಞರು ಈ ಮಹತ್ತರವಾದ ಸೇವಾ ಕಾರ್ಯದಲ್ಲಿ ಭಾಗಿಗಳಾಗಿದ್ದರು. ಒಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳಿಗೂ ಮಿಗಿಲಾಗಿ ಕುಷ್ಠರೋಗಿಗಳ ಸೇವಾ ಕಾರ್ಯವನ್ನು ಭಗವದರ್ಪಿತ ಭಾವನೆಯಲ್ಲಿ ಏಕಪ್ರಕಾರವಾಗಿ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯೆಂದು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಸದ್ಯದಲ್ಲಿಯೇ ಮತ್ತೊಂದು ತಂಡ ಈ ಯೋಜನೆಯಡಿಯಲ್ಲಿ ಸೇವೆಯನ್ನು / ಔಷಧೋಪಚಾರಗಳನ್ನು ಪಡೆಯಲು ಅಣಿಯಾಗಿದೆ. ಈ ಯೋಜನೆಯು ಡೇಮಿಯನ್ ಫೌಂಡೇಷನ್, ಚೆನ್ನೈ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಪ್ರಾಯೋಜಕತ್ವದಲ್ಲಿ ಮುಂದುವರೆಯುತ್ತಿದೆ.
You May Also Like
ಚಿಕ್ಕನಾಯಕನಹಳ್ಳಿ: ಮಾ.16ರಂದು ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ನಾರಾಯಣಸ್ವಾಮಿ. ಎನ್
Comments Off on ಚಿಕ್ಕನಾಯಕನಹಳ್ಳಿ: ಮಾ.16ರಂದು ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ
ನಾರಾಯಣಸ್ವಾಮಿ. ಎನ್
Comments Off on ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ