ಚುನಾವಣೆ ಮಾಹಿತಿಃ ಸಹಾಯವಾಣಿ 1950 ಸಂಖ್ಯೆಗೆ 667 ಕರೆ

Helplines and apps that every voter should know about - Citizen Matters

ತುಮಕೂರು: ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬ0ಧಿಸಿದ ಮಾಹಿತಿಗಾಗಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬ0ಧಿಸಿದ ದೂರುಗಳನ್ನು ದಾಖಲಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1950 ಸಂಖ್ಯೆಯ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 29 ರಿಂದ ಏಪ್ರಿಲ್ 18ರವರೆಗೂ 667 ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು 25ನೇ ಜನವರಿ 1950ರಲ್ಲಿ ಸ್ಥಾಪನೆಯಾದ ಸವಿನೆನಪಿಗಾಗಿ ಮತದಾರರಿಗೆ ಚುನಾವಣಾ ಮಾಹಿತಿ ನೀಡಲು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಲು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950ರ ವ್ಯವಸ್ಥೆಯನ್ನು ಕಲ್ಪಿಸಿದೆ.
ಭಾರತದಾದ್ಯಂತ ಈ ವ್ಯವಸ್ಥೆಯಿದ್ದು, ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬ0ಧಿಸಿದ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ, ನ್ಯಾಯಸಮ್ಮತ ಚುನಾವಣೆ ನಡೆಸಲು ಸಲಹೆ/ಸೂಚನೆ/ಅಭಿಪ್ರಾಯಗಳನ್ನು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ವಿಧಾನಸಭಾ ಚುನಾವಣಾ ಸಂದರ್ಭವಾಗಿರುವುದರಿ0ದ 1950 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬ0ಧಿಸಿದ ದೂರುಗಳನ್ನು ದಾಖಲಿಸಬಹುದಾಗಿದ್ದು, ಕರೆ ಮಾಡಿದ ದೂರುದಾರರಿಗೆ ದೂರು ನೋಂದಣಿ ಸಂಖ್ಯೆಯನ್ನು ಒದಗಿಸಲಾಗುವುದು. ಜಿಲ್ಲೆಯ ಹೊರಗಿನಿಂದ ಕರೆ ಮಾಡಿ ಮಾಹಿತಿ ಪಡೆಯಲು/ ದೂರು ನೀಡಲು ಎಸ್‌ಟಿಡಿ ಕೋಡ್ ಸಂಖ್ಯೆ 0816 ಬಳಸಿ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದಾಗಿದೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದುಹಾಕುವುದು, ವರ್ಗಾವಣೆ/ಸ್ಥಳಾಂತರ ಮಾಹಿತಿ, ಮತಗಟ್ಟೆ ಮಾಹಿತಿ, ಇವಿಎಂ, ವಿವಿಪ್ಯಾಟ್‌ಗಳ ಕಾರ್ಯಾಚರಣೆ ಕುರಿತು ಚುನಾವಣೆಗೆ ಸಂಬ0ಧಿಸಿದ ಮತ್ತಿತರ ಯಾವುದೇ ಮಾಹಿತಿಯನ್ನು ಮೊಬೈಲ್ ಅಥವಾ ಸ್ಥಿರ ದೂರವಾಣಿಯಿಂದ 1950 ಸಂಖ್ಯೆಗೆ ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ.
1950ರ ವಿಶೇಷತೆ:-
ವಿಧಾನಸಭಾ ಚುನಾವಣೆಗೆ ಸಂಬ0ಧಿಸಿದ ದೂರುಗಳನ್ನು ಸ್ವೀಕರಿಸಲು ಎನ್‌ಜಿಆರ್‌ಎಸ್(NGRS-National Grievances Re-addressable System) ಪೋರ್ಟಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಸ್ವೀಕರಿಸಲಾಗುವ ದೂರುಗಳನ್ನು ಕ್ರೋಢೀಕರಿಸಿ ಸಂಬAಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗುವುದು. ಕರೆ ಮಾಡಿದ ಗ್ರಾಹಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲಾಗುವುದು. ಚುನಾವಣಾ ಮಾಹಿತಿ ಪಡೆಯಲು ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಲು ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ.
ನವೆಂಬರ್ 9ರಿಂದ ಕಾರ್ಯಾರಂಭ :-
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಅಂದರೆ 2022ರ ನವೆಂಬರ್ 9ರಿಂದಲೇ ಸಹಾಯವಾಣಿ ಕಾರ್ಯಾರಂಭವಾಗಿದ್ದು, ನವೆಂಬರ್ 12 ರಿಂದ 2023ರ ಏಪ್ರಿಲ್ 18ರವರೆಗೆ ಮತದಾರರ ಪಟ್ಟಿ ಹಾಗೂ ಚುನಾವಣೆಗೆ ಸಂಬ0ಧಿಸಿದ 1350 ಕರೆಗಳನ್ನು ಸ್ವೀಕರಿಸಲಾಗಿದೆ.
ನೀತಿ ಸಂಹಿತೆ ಜಾರಿಗೆ ಬಂದ ದಿನ ಅಂದರೆ ಮಾರ್ಚ್ 29 ರಿಂದ 1950 ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಗಳ (24×7) ಕಾಲ ಕಾರ್ಯನಿರ್ವಹಿಸುತ್ತಿದ್ದು, ಮಾ.29 ರಿಂದ ಏಪ್ರಿಲ್ 18ರವರೆಗೂ ಮತದಾರರ ಪಟ್ಟಿಗೆ ಹೊಸ ಸೇರ್ಪಡೆ(ನಮೂನೆ-6)ಗೆ ಸಂಬ0ಧಿಸಿದ0ತೆ 165 ಕರೆ, ಪಟ್ಟಿಯಿಂದ ಹೆಸರು ತೆಗೆದು ಹಾಕಲು(ನಮೂನೆ-7) 3 ಕರೆಗಳು, ತಿದ್ದುಪಡಿ/ವರ್ಗಾವಣೆ/ಬದಲಿ ಕಾರ್ಡ್/ ವಿಕಲ ಚೇತನ ಮತದಾರರಿಗೆ ಸಂಬAಧಿಸಿದAತೆ(ನಮೂನೆ-8) 161 ಕರೆ, ಗುರುತಿನ ಚೀಟಿಗಳ ಆಧಾರ್ ಲಿಂಕ್(ನಮೂನೆ-6ಬಿ)ಗೆ ಸಂಬ0ಧಿಸಿದ0ತೆ 9, ಮತದಾರರ ಗುರುತಿನ ಚೀಟಿಗೆ ಸಂಬ0ಧಿಸಿದ0ತೆ 50, ಮತದಾರರ ಪಟ್ಟಿಗೆ ಸಂಬ0ಧಿಸಿದ0ತೆ 37, ಆನ್‌ಲೈನ್ ಅಪ್ಲಿಕೇಷನ್ ಮಾಹಿತಿಗಾಗಿ 187, ಇತರೆ 33 ಕರೆಗಳು ಹಾಗೂ ಅಕ್ರಮ ನಗದು/ಮದ್ಯ ಹಂಚಿಕೆ/ಮತ್ತಿತರ ಚುನಾವಣಾ ಅಕ್ರಮಗಳಿಗೆ ಸಂಬ0ಧಿಸಿದ0ತೆ 22 ದೂರು ಸೇರಿ ಒಟ್ಟು 667 ಕರೆಗಳನ್ನು ಸ್ವೀಕರಿಸಲಾಗಿದೆ.
24×7 ಕಾರ್ಯ ನಿರ್ವಹಣೆ :-
ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಹಾಯವಾಣಿ 1950 ಸಂಖ್ಯೆಯು ದಿನದ 24 ಗಂಟೆಗಳ(24×7) ಕಾಲ ಕಾರ್ಯ ನಿರ್ವಹಿಸುತ್ತಿದೆ. ದಿನದಲ್ಲಿ 3 ಪಾಳಿಯಲ್ಲಿ ಕಾರ್ಯ ನಿರ್ವಹಿಸಲು 13 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ 3 ಗಣಕ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

You May Also Like