ತಾನೊಬ್ಬ ಕಲಾವಿದನಾಗಿರುವುದರಿಂದ ಬೇರೆ ಪಕ್ಷಗಳು ತನ್ನಿಂದ ಪ್ರಚಾರ ಬಯಸುವುದು ಸ್ವಾಭಾವಿಕ, ಆದರೆ ಈ ಬಾರಿ ಬಿಜೆಪಿಗೆ ಕಮಿಟ್ ಆಗಿರುವುದರಿಂದ ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಸುದೀಪ್ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ನೀಡಿದ ಭರವಸೆಯಂತೆ ಸಿನಿಮಾ ನಟ ಕಿಚ್ಚ ಸುದೀಪ್ (Kiccha Sudeep) ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ತೆರಳುವ ಮೊದಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸುದೀಪ್ ಯಾವ್ಯಾವ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡಬೇಕೆಂದು ಮುಖ್ಯಮಂತ್ರಿಗಳು ಒಂದು ಲಿಸ್ಟ್ ಮಾಡಿಕೊಂಡಿದ್ದಾರೆ, ಆ ಪಟ್ಟಿಯ ಪ್ರಕಾರ ಪ್ರಚಾರ ಕಾರ್ಯ ನಡೆಸುವುದಾಗಿ ಹೇಳಿದರು. ಬೇರೆ ಪಕ್ಷದ ಅಭ್ಯರ್ಥಿಗಳ ಪರವೂ ಕ್ಯಾಂಪೇನ್ ಮಾಡುವಿರಾ ಅಂತ ಕೇಳಿದಾಗ, ತಾನೊಬ್ಬ ಕಲಾವಿದನಾಗಿರುವುದರಿಂದ ಬೇರೆ ಪಕ್ಷಗಳು ತನ್ನಿಂದ ಪ್ರಚಾರ ಬಯಸುವುದು ಸ್ವಾಭಾವಿಕ, ಆದರೆ ಈ ಬಾರಿ ಬಿಜೆಪಿಗೆ ಕಮಿಟ್ ಆಗಿರುವುದರಿಂದ ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದರು.