ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಂತೆ ಬಯಲುಸೀಮೆಯ ಹದಿನೈದು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಮೂಡಲಪಾಯ ಯಕ್ಷಗಾನವು ಕರ್ನಾಟಕದ ಅತ್ಯಂತ ಜನಪ್ರಿಯ ಜಾನಪದ ಕಲೆಗಳಲ್ಲಿ ಒಂದಾಗಿದ್ದು ಇದು ಓದು ಬರಹ ಬಾರದ ಗ್ರಾಮೀಣರಿಗೆ ರಾಮಾಯಣ, ಮಹಾಭಾರತಗಳ ಪ್ರಮುಖ ಘಟನೆಗಳು ಹಾಗೂ ಇತರ ಪ್ರಸಂಗಗಳನ್ನು ನೇರವಾಗಿ ತಲುಪಿಸುವ ಅತ್ಯದ್ಭುತ ಕಲೆಯಾಗಿದೆ. ನೃತ್ಯ, ಸಂಗೀತ, ಸಂಭಾಷಣೆ ಮತ್ತು ಅಭಿನಯಗಳೆಂಬ ನಾಲ್ಕು ಕಲಾ ಮಧ್ಯಮಗಳ ಸಮ್ಮಿಶ್ರ ಕಲೆಯಾದ ಇದು ಸಂಗೀತ, ನೃತ್ಯ ಮತ್ತು ಆಕರ್ಷಕ ಸಂಭಾಷಣೆಗಳ ಮೂಲಕ ಜನರನ್ನು ರಂಜಿಸುವ ಕಲೆಯಾಗಿದೆ.
ಕಿರುತರೆ ಚಿತ್ರಗಳು, ಚಲನಚಿತ್ರಗಳ ಸಿನೆಮಾಗಳ ಹಾಗೂ ಆಧುನಿಕತೆಯ ಪ್ರಭಾವದ ನಡುವೆ ಪೂರ್ವಜರ ಕಾಲದ ಅನೇಕ ಕಲೆಯನ್ನು ಸಾರುವ ಸಂಸ್ಕøತಿಯನ್ನು ಬಿಂಬಿಸುವ ಜನಪದ-ಜಾನಪದ ಹಾಡುಗಳನ್ನು ಮುಂದಿನ ತಲೆಮಾರುಗಳಿಗೆ ಸಾರುವ ಕಲೆಯ ಅರಾಧಕರಿಗೆ ಪೆÇ್ರೀತ್ಸಾಹವಿಲ್ಲದೇ ಸೊರಗುತ್ತಿದ್ದರೂ ಸಹ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳದೆ ತಕದಿಮಿ ತಕದಿಮಿ, ಭಲೋರೈ ಸಾರಥಿ.. .. ಎನ್ನುವ ಯಕ್ಷಗಾನವು ಸಹ ಇಂದು ಕಣ್ಮರೆಯಾಗುವ ಸ್ಥಿತಿಯು ಕಾಣುತ್ತಿದೆ.
ಸಂಗೀತ, ಕುಣಿತ, ಅಲಂಕಾರ, ಸಾಹಿತ್ಯ, ವೇಷಭೂಷಣಗಳ ಸಮ್ಮಿಳಿತವಾಗಿರುವ ಮೂಡಲಪಾಯ ಯಕ್ಷಗಾನ ಕಲೆಯ ಅಂಗಗಳಲ್ಲಿ ಇಂದು ಅವಸಾನದ ಅಂಚು ತಲುಪಿದೆ. ನಮ್ಮ ನಾಡಿನ ಸಾಂಸ್ಕøತಿಕ ಲೋಕ ಶತಮಾನಗಳ ಹಿಂದೆ ರೂಪುಗೊಂಡಿರುವ ಸಾಂಸ್ಕೃತಿಕ ಶೋಧವನ್ನು ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಆದ್ದರಿಂದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಾಯಭಾರಿಯೆನಿಸಿರುವ ತಿಪಟೂರಿನ ಅಕ್ಕಪಕ್ಕದ ಜನಪದ ಜಾನಪದ ಲೋಕ ಪ್ರಾಚೀನ ಕಲಾಪ್ರಕಾರವಾದ ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಕೇಂದ್ರದ ಮುಂದಿದೆ. ತಾತ ಮುತ್ತಾತನ ಕಾಲದ ಮೂಡಲಪಾಯ ಯಕ್ಷಗಾನ ಕಲಾಪ್ರಕಾರವೂ ಪೆÇ್ರೀತ್ಸಾಹವಿಲ್ಲದೇ ಸೊರಗುತ್ತಿದೆ.
ಕೊನೇಹಳ್ಳಿಯಲ್ಲಿ ಕಲಾ ಪೋಷಕರಾದ ಬಿ.ನಂಜುಡಪ್ಪ, ಭಾಗವತರಾಗಿದ್ದ ಪಟೇಲ್ ನರಸಪ್ಪ ಹಾಗೂ ಜನಪದ ತಜ್ಞರಾಗಿದ್ದ ಡಾ.ಜಿ.ಶಂ.ಪರಮಶಿವಯ್ಯ ಹಾಗೂ ಮುಂತಾದವರು ಸೇರಿ ಕೊನೇಹಳ್ಳಿಯಲ್ಲಿ ಮೂಡಲಪಾಯ ಯಕ್ಷಗಾನದ ಪುನಶ್ಚೇತನಕ್ಕೆ 1969ರಲ್ಲಿ ಬಿದಿರೆಯಮ್ಮ ಯಕ್ಷಗಾನ ಮಂಡಲಿ ಸ್ಥಾಪಿಸಿದರು.
ಈ ಮಂಡಳಿ 1981ರಲ್ಲಿ ದಶಮಾನೋತ್ಸವ ಆಚರಿಸಿಕೊಂಡಿದ್ದು, ಕೊನೇಹಳ್ಳಿಗೆ ಮೂಡಲಪಾಯ ಯಕ್ಷಗಾನ ಕಲಾಕಾಶಿ ಎಂಬ ಬಿರುದು ಪ್ರಾಪ್ತವಾಯಿತು. ಈ ಕಲೆಯ ಪುನರುತ್ಥಾನಕ್ಕಾಗಿ ಇದೇ ಮಂಡಳಿಯಿಂದ 1982ರಲ್ಲಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಕೂಡ ಸ್ಥಾಪನೆಯಾಯಿತು. ನಂತರ ದಿನಗಳಲ್ಲಿ ದಶಮಾನೋತ್ಸವ ಸಮಾರಂಭದಲ್ಲಿ ನಿರ್ದರಿಸಿದ್ದಂತೆ ಆಗಿನ ಜಿಲ್ಲಾಧಿಕಾರಿಯಾಗಿದ್ದ ಆರ್ಯಮಿತ್ರ ಅವರ ಸಹಕಾರ ಮತ್ತು ದಾನಿ ನಂಜುಂಡಪ್ಪ ಅವರ ನೆರೆವಿನಿಂದ, ಇಂಜಿನಿಯರ್ ವಿಷ್ಣುಕುಮಾರ್ ಗೋಡೆಗಳ ನಿರ್ಮಾಣದ ಯಕ್ಷಗಾನ ಮುಕುಟ ಮತ್ತು ತೋಳಿನ ಕವಜದ ಲಾಂಛನದ ರೀತಿ ಹಾಗೂ ಇಂಜಿನಿಯರ್ ಎನ್. ಸತ್ಯನಾರಾಯಣ ಯೋಜನೆಯ ಅರ್ಧವೃತ್ತಾಕಾರದ ಬಾಗಿಲು ಶೈಲಿಯಲ್ಲಿ ಅಂದಿನ 2 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 30*25 ಅಡಿ ಉದ್ದದ ಸೆಪ್ಟಂಬರ್ 17, 1983ರಲ್ಲಿ ಯಕ್ಷಗಾನ ಬಯಲು ರಂಗ ಮಂದಿರ ಕೊನೆಹಳ್ಳಿಯಲ್ಲಿ ನಿರ್ಮಾಣವಾಯಿತು.
ಸತತ ಪರಿಶ್ರಮದಿಂದ ರೂಪಿಸಿದ ಮೂಡಲಪಾಯ ತಂಡವು ಕರ್ನಾಟಕ, ದೆಹಲಿ, ಮುಂಬೈ, ಚೆನೈ, ಕೋಲ್ಕತ್ತಾ, ನಾಗಪುರ, ಓರಿಸ್ಸಾ, ಹೈದ್ರಾಬಾದ್, ಸೇರಿದಂತೆ ದೇಶದ ನಾನಾ ಕಡೆ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆದ ಉತ್ಸವÀಗಳಲ್ಲಿ ಭಾಗಿ ಆಯಿತು. ರಾಷ್ಟ್ರೀಯ ಯಕ್ಷಗಾನ ಮೇಳಗಳಲ್ಲಿ ಪ್ರದರ್ಶನ ನೀಡಿತು. ಆಕಾಶವಾಣಿಯಲ್ಲಿ ಹಲವಾರು ಪ್ರಸಂಗಗಳು ಪ್ರಸಾರಗೊಂಡಿತು.
ಇಲ್ಲಿನ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಸಹಯೋಗದಲ್ಲಿ ಡಾ. ಎಲ್.ಆರ್.ಹೆಗ್ಗಡೆ. ಡಾ.ಎಂ.ಎಸ್.ಸುಂಕಾಪುರ. ಡಾ ಹೆಚ್.ಎಲ್.ನಾಗೇಗೌಡ ಭಾಗವತರು, ಹಿರಿಯ ಯಕ್ಷಗಾನ ಕಲಾವಿದರು, ವಿದ್ವಾಂಸರೂ ಸೇರಿದಂತೆ, 30 ಯಕ್ಷಗಾನ ತಂಡಗಳನ್ನು ಆಹ್ವಾನಿಸಿ 10 ದಿನಗಳ ಮೂಡಲಪಾಯ ಕಮ್ಮಟ ಆಯೋಜಿಸಲಾಗಿದೆ.
ಈ ಕೇಂದ್ರದ ಮಕ್ಕಳು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪ್ರತಿಷ್ಟಿತ ಬಾಲಸಂಗಮ್ ಮುಂತಾದ ಉತ್ಸವಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದು, ಈ ಎಲ್ಲ ಶ್ರಮಗಳು ಮೂಡಲಪಾಯ ಯಕ್ಷಗಾನವು ತನ್ನ ಅಂತಸತ್ವವನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿಡುವಲ್ಲಿ ಸಹಕಾರಿಯಾಗಿದೆ. ಇಂತಹ ಕೇಂದ್ರವು 2020 ಫೆಬ್ರವರಿಯಲ್ಲಿ ಸುವರ್ಣ ಸಂಭ್ರಮದ ಆಚರಣೆಯನ್ನು ಮಾಡಿ ಮೂರು ದಿನಗಳ ಕಾಲ ಕಲೆಯನ್ನು ಪ್ರದರ್ಶನ ನೀಡಲಾಯಿತು.
ಇತ್ತೀಚೀನ ದಿನಗಳಲ್ಲಿ ತಿಪಟೂರಿನ ಭೂಮಿ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಮೂಡಲಪಾಯ ಚಿಣ್ಣರ ವಸಂತೋತ್ಸವ ಏರ್ಪಡಿಸಿದ್ದರು. ಹೊಸ ತಲೆಮಾರಿನ ಭಾಗವತರಾದ ಬಸವರಾಜು ನಿರ್ದೇಶನದಲ್ಲಿ ‘ಕರಿಬಂಟನ ಕಾಳಗ’ ಮತ್ತು ‘ದೇವಿ ಮಹಾತ್ಮೆ’ ಪ್ರಸಂಗಗಳು ಪ್ರದರ್ಶನಗೊಂಡವು. ಮೂಡಲಪಾಯ ಯಕ್ಷಗಾನ ಪ್ರಕಾರಕ್ಕೆ ವಿಶ್ವವಿದ್ಯಾಲಯದಂತಿದ್ದು ಇದೀಗ ಈ ಕೇಂದ್ರದ ಪುನಃಶ್ಚೇತನಕ್ಕೆ ಸರ್ಕಾರ ಹಾಗೂ ಸಂಬಂದಪಟ್ಟ ಅಕಾಡೆಮಿಗಳು ಮುಂದೆ ಬರಬೇಕಿದೆ.
ಪ್ರಾಚೀನ ಕಾಲದ ಒಂದು ಸಾಂಸ್ಕೃತಿಕ ಶೋಧವನ್ನ ಮುಂದಿನ ಪೀಳಿಗೆಗೂ ಉಳಿಸಿ ಸಾಂಸ್ಕೃತಿಕ ಲೋಕದ ವೈಭವವನ್ನ ಉಳಿಸುವ ನಿಟ್ಟಿನಲ್ಲಿ ಸಮರ್ಪಣಾ ಮನೋಭಾವದಿಂದ ಕಲೆಯನ್ನೇ ಆರಾಧಿಸುತ್ತಿದ್ದಾರೆ. ಇಂತಹ ವಿಶಿಷ್ಟವಾದ ಕಲೆ ಮೂಡಲಪಾಯದ ಕಲಾವಿದರುಗಳು ಸ್ವತಃ ತಾವೇ ಖರ್ಚು ಮಾಡಿಕೊಂಡು ಯಾವುದೇ ಸಂಭಾವನೆ ಪಡೆಯದೇ ಮೂಡಲಪಾಯವನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳ ಪ್ರಭಾವದ ನಡುವೆ ಸೊರಗುತ್ತಿರುವ ನಾಡಿನ ಮೂಡಲಪಾಯ ಯಕ್ಷಗಾನ ಕಲೆಯನ್ನು ಪೆÇ್ರೀತ್ಸಾಹಿಸಿ ಉಳಿಸುವ ಕಾರ್ಯವನ್ನ ಅನೇಕ ಮಂದಿ ಮಾಡುತ್ತಿದ್ದಾರೆ. ನಾಡಿನ ಸಾಂಸ್ಕೃತಿಕ ರಾಯಭಾರಿ ಎನಿಸಿರುವ ಜಾನಪದಲೋಕ ಸೊರಗುತ್ತಿರುವ ಅನೇಕ ಜಾನಪದ ಮತ್ತು ಸಾಂಸ್ಕೃತಿಕ ಸಂಪತ್ತನ್ನ ಉಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಾನಪದ ಲೋಕದೊಂದಿಗೆ ಕೈಜೋಡಿಸಿದರೆ ನಮ್ಮ ನಾಡಿನ ಸಂಸ್ಕøತಿಯ, ಸಾಂಸ್ಕೃತಿಕ ಲೋಕದ ಅಸ್ಮಮಿತೆಯನ್ನು ಗತಕಾಲದ ವೈಭವ ಮರುಕಳಿಸಲು ಸಾಧ್ಯವಾಗುತ್ತದೆ.
ಕೋಟ್ 01 : ಪೆÇ್ರ ಕೆ ಪುಟ್ಟರಂಗಪ್ಪ. ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಇತಿಹಾಸ ಸಂಶೋಧಕರು.
ಐದುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಮೂಡಲಪಾಯ ಯಕ್ಷಗಾನ ಇಂದು ನಿನ್ನೆಯದಲ್ಲ ಅನೇಕ ತಲೆಮಾರುಗಳು ನಿರಂತರವಾಗಿ ದುಡಿದು ಕಟ್ಟಿದ ಪರಂಪರೆಯೊಂದು ಇದರ ಬೆನ್ನ ಹಿಂದೆ ಇದೆ. ನಮಗೆ ದೊರೆತಿರುವ ದಾಖಲೆಗಳ ಪ್ರಕಾರ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಅಂದೇನಹಳ್ಳಿ ಮೂಡಲಪಾಯದ ಮೂಲಸ್ಥಳವಾಗಿದ್ದು ಆ ಊರಿನ ಒಕ್ಕಲಿಗ ಸಮಾಜದ ಜೀರಿಗೆ ಕೆಂಪಯ್ಯನ ಹಿರಿಯ ಮಗ ಓದೋ ಕೆಂಪಯ್ಯನ ಮಗನಾದ ಕೆಂಪಣ್ಣಗೌಡನೇ ಮೂಡಲಪಾಯದ ಅತ್ಯಂತ ಪ್ರಾಚೀನ ಕವಿಯಾಗಿದ್ದು 1480 ರ ಸುಮಾರಿಗೆ ಈತನು ರಚಿಸಿದ ಕರಿರಾಯ ಚರಿತೆಯೇ ಮೂಡಲಪಾಯದ ಮೊಟ್ಟಮೊದಲ ಕೃತಿಯಾಗಿದೆ.
ಆದರೆ ಇತ್ತೀಚಿಗೆ ಆಧುನಿಕ ಮನರಂಜನಾ ಮಾಧ್ಯಮಗಳಾದ ಚಲನಚಿತ್ರ, ದೂರದರ್ಶನ ಮತ್ತು ಮೊಬೈಲ್ಗಳ ಪ್ರಭಾವದಿಂದ ಮೂಡಲಪಾಯ ಯಕ್ಷಗಾನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು ಬಯಲುಸೀಮೆಯ ಪರಂಪರಾನುಗತ ಈ ಗಂಡುಕಲೆಯ ಉಳಿವಿಗಾಗಿ ಸರ್ಕಾರ ಮತ್ತು ಸಂಘಸಂಸ್ಥೆಗಳು ಮುಂದೆ ಬರಬೇಕಾಗಿದೆ. ಪೆÇ್ರೀತ್ಸಾಹವಿಲ್ಲದೆ ಸೊರಗುತ್ತಿರುವ ಈ ಕಲೆಯನ್ನು ಉಳಿಸಲು ಕ್ರಮ ಕೈಗೊಂಡು ಶಾಲಾ ಪಠ್ಯದಲ್ಲಿ ಮೂಡಲಪಾಯವನ್ನು ಒಂದು ಅಧ್ಯಯನದ ವಿಷಯವಾಗಿ ಸೇರಿಸಬೇಕು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಮೂಡಲಪಾಯ ಯಕ್ಷಗಾನ ತಂಡಗಳಿಗೆ ವಿಶೇಷ ಆದ್ಯತೆ ನೀಡಬೇಕು ಹಾಗೂ ಬಹು ಮುಖ್ಯವಾಗಿ ಭಾಗವತರು ಮತ್ತು ಕಲಾವಿದರು ಕೂಡ ಇಂದಿನ ಪರಿಸ್ಥಿತಿಗೆ ಹೊಂದಿಕೊಂಡು ರಾತ್ರಿಯಿಡೀ ಮಾಡುವ ಪ್ರದರ್ಶನದ ಬದಲಾಗಿ ಆಧುನಿಕ ನಾಟಕ ಮತ್ತು ಸಿನಿಮಾಗಳಂತೆ ಎರಡೂವರೆ ಅಥವಾ ಮೂರು ಘಂಟೆಗೆ ತಮ್ಮ ಪ್ರದರ್ಶನವನ್ನು ಸೀಮಿತಗೊಳಿಸಿಕೊಳ್ಳಬೇಕು, ಪ್ರದರ್ಶನದಲ್ಲಿ ಬಳಸುವ ಭಾμÉಯನ್ನು ಸುಧಾರಿಸಿಕೊಳ್ಳಬೇಕು, ಈಗ ಬಳಸುತ್ತಿರುವ ಅತಿ ಭಾರದ ವಸ್ತ್ರ ಮತ್ತು ಒಡವೆಗಳ ಬದಲು ಅವರ ನಟನೆ ಮತ್ತು ನೃತ್ಯ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಹಗುರವಾದವುಗಳನ್ನು ಸಿದ್ದಪಡಿಸಿಕೊಂಡರೆ ಮಾತ್ರ ನಮ್ಮ ನೆಲಮೂಲ ಸಂಸ್ಕøತಿಯ ಈ ಗಂಡುಕಲೆ ಮೂಡಲಪಾಯ ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಾಧ್ಯ.
ಕೋಟ್.02.: ಶಂಕರಪ್ಪ ಅಂಚೆಕೊಪ್ಪಲು. ಕಲಾವಿದರು. ಖಜಾಂಚಿ. ಮೂಡಲಪಾಯ ಯಕ್ಷಗಾನ ಟ್ರಸ್ಟ್.
ಪೂರ್ವಜರ ಕಾಲದಿಂದಲೂ ಕಲೆಯನ್ನು ಕೋನೇಹಳ್ಳಿಯ ಭಾಗದಲ್ಲಿ ನೋಡುತ್ತಾ, ಬಣ್ಣ ಹಚ್ಚುವ ಮೂಲಕ ಕಲಿಯುತ್ತಾ, ಕುಣಿಯುತ್ತಾ, ಆರಾಧಿಸುತ್ತಾ, ಬರುತ್ತಿದ್ದೆವೆ ಆದರೆ ಇತ್ತೀಚೀನ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಯಕ್ಷಗಾನ ಮಂದಿರಗಳನ್ನು ಉಳಿಸಲು ಕಲಾ ಪೋಷಕರು ಹಾಗೂ ಸಂಘ ಸಂಸ್ಥೆಗಳ ಸಹಯೋಗ ಅತ್ಯಂತ ಅವಶ್ಯಕವಾಗಿದೆ. ನಶಿಸುತ್ತಿರುವ ಕಲೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟ್ 03 ಉಮೇಶ್ ಕಲಾವಿದರು.
ಮೂಡಲಪಾಯ ಯಕ್ಷಗಾನ ಟ್ರಸ್ಟ್ ಮೂಲಕ ಸುಮಾರು 35 ವರ್ಷಗಳಿಂದ ಕಲಾವಿದರು ಕಲೆಯನ್ನು ಉಳಿಸುವ ಕಾಯಕವನ್ನು ಮಾಡುತ್ತಿದ್ದು, ವಯಸ್ಸಾದ ಹಿರಿಯ ಕಲಾವಿದರಿಗೆ ಮಾಶಾಸನ ನೀಡುವಲ್ಲಿ ಸರ್ಕಾರಗಳ ವಿಳಂಬ ಧೋರಣೆಗಳನ್ನು ಅನುಸರಿಸುತ್ತಿದ್ದು ಇಂದಿನ ಯುವ ಪೀಳಿಗೆಗೆ ಕಲೆಯ ಕಡೆ ಉತ್ಸಾಹ ತೋರುತ್ತಿಲ್ಲ. ಕಲಾವಿದರನ್ನು ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ.
ಇಂದಿಗೂ ಯಾವುದೇ ಹೊರಗಿನ ಪ್ರಭಾವಕ್ಕೆ ಒಳಗಾಗದೆ ಗ್ರಾಮೀಣ ಜನರ ಕೈಯಲ್ಲಿ ಮೂಲಸ್ವರೂಪದಲ್ಲಿಯೇ ಉಳಿದುಕೊಂಡಿರುವ ಮೂಡಲಪಾಯ ಯಕ್ಷಗಾನ ಒಂದು ಜೀವಂತ ಗಂಡುಕಲೆಯಾಗಿದ್ದು ಇದನ್ನು ಹಬ್ಬಹರಿದಿನಗಳು, ಜಾತ್ರೆ ಉತ್ಸವಗಳು ಹಾಗೂ ರೈತರಿಗೆ ಬಿಡುವಿರುವ ಸಮಯಗಳಲ್ಲಿ ಹಳ್ಳಿಗಳಲ್ಲಿ ಪ್ರದರ್ಶಿಸುವ ರೂಢಿ ಇಂದಿಗೂ ಇದೆ. ಯಾವುದೇ ರಾಜಾಶ್ರಯವಿಲ್ಲದೆ ಚೆನ್ನಾಗಿ ಬೆಳೆದ ಈ ಕಲೆ ಇಂದಿಗೂ ಉಳಿಯಲು ನೂರಾರು ಭಾಗವತರು, ಹಿಮ್ಮೇಳದವರು, ತಬಲಾ, ಮೃದಂಗ, ಮುಖವೀಣೆ ಮುಂತಾದ ವಾದ್ಯಗಾರರು, ಸಾವಿರಾರು ಸಂಖ್ಯೆಯ ಕಲಾವಿದರು, ವಸ್ತ್ರವಿನ್ಯಾಸಕರು ಹಾಗೂ ಅಲಂಕಾರಿಕ ಒಡವೆಗಳ ತಯಾರಕರ ಶ್ರಮ ಅತಿ ಮುಖ್ಯವಾಗಿದೆ.
ಜೊತೆಗೆ ಒಂದು ಹಂತದಲ್ಲಿ ಈ ಕಲೆ ನಶಿಸುವ ಅಪಾಯ ಕಂಡುಬಂದಾಗ ಇದನ್ನು ಉಳಿಸುವ ಪ್ರಯತ್ನ ಮಾಡಿದ ‘ಜಾನಪದಲೋಕದ ಪಿತಾಮಹ ಡಾ.ಹೆಚ್.ಎಲ್ ನಾಗೇಗೌಡ, ಕೊನೆಹಳ್ಳಿಯಲ್ಲಿ ಕರ್ನಾಟಕದ ಮೊಟ್ಟಮೊದಲ ‘ಮೂಡಲಪಾಯ ಯಕ್ಷಗಾನ ರಂಗಮಂದಿರ’ ನಿರ್ಮಿಸಿದ ಡಾ ಜಿ.ಶಂ.ಪ, ಕಲೆ ಮತ್ತು ಕಲಾವಿದರಿಗೆ ಆಶ್ರಯ ನೀಡಿ ರಕ್ಷಿಸಿದ ಬಿ.ನಂಜುಂಡಪ್ಪ, ಜಾನಪದ ವಿದ್ವಾಂಸ ಡಿ.ಕೆ ರಾಜೇಂದ್ರ, ಅಂಚೆಕೊಪ್ಪಲು ಶಂಕರಪ್ಪ, ಭಾಗವತರಾದ ಪಟೇಲ್ ನಾರಸಪ್ಪ, ಗೌಡನಕಟ್ಟೆ ಬಸವರಾಜು, ಪುಟ್ಟಶಂಕರಪ್ಪ, ಕಲ್ಲುಮನೆ ನಂಜಪ್ಪ, ದಾಸಾಚಾರ್, ಧರ್ಮಯ್ಯ, ಭೀಮಯ್ಯ ಆಶ್ವಥ್, ಉಮೇಶ್, ರಾಜಶೇಖರ್, ಮಂಜುನಾಥ್ ಮುಂತಾದವರ ಕೊಡುಗೆ ಅಪಾರವಾಗಿದ್ದು, ತುಮಕೂರು ಜಿಲ್ಲೆಯ ಅದರಲ್ಲೂ ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳಲ್ಲಿ ಈ ಕಲೆ ಉಳಿಯಲು ಈ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ.
ಕರಾವಳಿ ಯಕ್ಷಗಾನ ಮೂಲತಃ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಅಳವಡಿಸಿಕೊಂಡಿರುವ ಅಂಶವಾಗಿದ್ದು, ಮೂಡಲಪಾಯ ಯಕ್ಷಗಾನ ಸ್ಥಳೀಯ ಕಥಾ ಪ್ರಸಂಗÀÀಳನ್ನು ಪ್ರಸ್ತುತಪಡಿಸುವಂತಹ ಕಲೆ. ಬಯಲಾಟದ ಬಹುತೇಕ ಘಟನೆಗಳು ಕಾಳಗಗಳು, ದೇವಿ ಮಹಾತ್ಮೆ, ದಕ್ಷಯಜ್ಞ, ಸಮಾಜದ ಮೌಲ್ಯಗಳನ್ನು ಕಾಪಾಡುವಂತಹ ಕಥಾ ಚರಿತ್ರೆಗಳನ್ನು ಹೊಂದಿದೆ. ಕರಾವಳಿ ಯಕ್ಷಗಾನದಲ್ಲಿ ಭಾಗವತರು ಮತ್ತು ನಟರು ವಿದ್ಯಾವಂತರಾಗಿರುವ ಕಾರಣಕ್ಕೆ ಅವರಿಬ್ಬರಲ್ಲೂ ಹೊಂದಾಣಿಕೆ ಇರುತ್ತದೆ. ಆದರೆ, ಮೂಡಲಪಾಯ ಯಕ್ಷಗಾನದಲ್ಲಿ ಹಾಗಿಲ್ಲ. ಅದರಲ್ಲೂ ಹೆಣ್ಣಿನ ಪಾತ್ರವನ್ನು ಪುರುಷನೇ ಮಾಡುವುದು ಹಾಸ್ಯಾಸ್ಪದವಾಗಿದೆ.
ಪ್ರದರ್ಶನಗೊಂಡ ಪ್ರಸಂಗಗಳು : ಬಕಾಸುರ ವಥೆ, ಹಿಡಿಂಬಾಸುರ ವಧೆ, ಕೌಂಡಲಿಕ ವಧೆ, ದ್ರೌಪದಿ ವಸ್ತ್ರಾಭರಣ, ಗಿರಿಜಾ ಕಲ್ಯಾಣ, ದೇವಿ ಮಹಾತ್ಮೆ, ಬಭ್ರುವಾಹನ ಕಾಳಗ, ಶಿವಜಲಂಧರ, ತ್ರೀಪುರಸಂಹಾರ, ಕರಿಭಂಟನಕಾಳಗ, ರತಿ ಕಲ್ಯಾಣ,