ಮಧುಗಿರಿ ತಾಲ್ಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯವರು ಮುಂದಿನ 6 ದಿನಗಳವರೆಗೆ ತಾಲ್ಲೂಕಿನಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಹಾಗೂ ತುಮಕೂರು ಜಿಲ್ಲೆ Yellow allert ಘೋಷಣೆಯಾಗಿರುತ್ತದೆ.
ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯತೊಂದರೆಯಾದಲ್ಲಿ ಮತ್ತು ಅವಘಡ ಸಂಭವಿಸುವ ಸಂದರ್ಭದಲ್ಲಿ ತುರ್ತು ಸೇವೆ ಪಡೆಯುವ ಉದ್ದೇಶದಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲ್ಲೂಕು ಕಛೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು ದೂರವಾಣಿ ಸಂಖ್ಯೆ:08137-200594 ಸಂಖ್ಯೆಗೆ ಸಾರ್ವಜನಿಕರು ಯಾವುದೇ ತುರ್ತು ಸೇವೆ ಪಡೆಯಲು ಸಂಪರ್ಕಿಸಬಹುದು.
ಇದರ ಸದುಪಯೋಗವನ್ನು ಪಡೆಯಲು ಮಧುಗಿರಿ ತಾಲ್ಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಹಾಗೂ ಗುಡುಗು, ಸಿಡಿಲು, ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಹೊರಗಡೆ ಹೊಗಬಾರದು, ವಿದ್ಯುತ್ ಕಂಬದ ಹತ್ತಿರ, ಮರದ ಕೆಳಗೆ ನಿಲ್ಲಬಾರದು ಎಂದು ಸಾರ್ವಜನಿಕರಲ್ಲಿ ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್ರವರು ಮನವಿ ಮಾಡಿದ್ದಾರೆ.