ಜಿಲ್ಲೆಯ ಗೊನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ಮನವಿ ಮಾಡಿದ್ದಾರೆ. ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯು ”Friends of Coconut Tree” ಕಾರ್ಯಕ್ರಮದಡಿ ಈ ಯೋಜನೆಯನ್ನು ಅನುμÁ್ಟನಗೊಳಿಸಿದೆ.
ಜಿಲ್ಲೆಯಲ್ಲಿ ಸುಮಾರು 2,24,507 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರ ಸುರಕ್ಷತಾ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗೊನೆಗಾರರಿಗೆ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ವಿವಿಧ ಸೌಲಭ್ಯ ಒದಗಿಸಲಾಗುವುದು. ತೆಂಗಿನ ಮರ ಹತ್ತುವವರು/ತೆಂಗಿನಕಾಯಿ ಕೀಳುವವರು/ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ದುರ್ಘಟನೆ/ ಅಪಘಾತವಾದ 7 ದಿನಗಳೊಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ನೀಡಬೇಕು. ಮರಣ ಹೊಂದಿದಲ್ಲಿ 7 ಲಕ್ಷ ರೂ., ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ 3.50 ಲಕ್ಷ ರೂ., ಆಸ್ಪತ್ರೆ ವೆಚ್ಚ (24 Hours IP) 2 ಲಕ್ಷ ರೂ., ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದಿದ ಕೊಯ್ಲುಗಾರನಿಗೆ ಗರಿಷ್ಠ 21,000 ರೂ.(ಪ್ರತಿ ವಾರ 3500 ರೂ.ನಂತೆ), ಆಂಬುಲೆನ್ಸ್ ಖರ್ಚು 3,500 ರೂ. ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5,500 ರೂ.ಗಳನ್ನು ವಿಮಾ ಕಂಪನಿಯಿಂದ ನೀಡಲಾಗುವುದು.
ಆಸಕ್ತ ತೆಂಗು ತೋಟಗಾರರು ತೆಂಗು ಅಭಿವೃದ್ಧಿ ಮಂಡಳಿಯ ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಧಾರ್ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿಮಾ ಪಾಲಿಸಿ ಹೊಂದಬಹುದಾಗಿದೆ.
ವಾರ್ಷಿಕ ವಿಮಾ ಕಂತಿನ ಹಣವನ್ನು 956 ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇದರಲ್ಲಿ ಶೇ.75:25 ರಂತೆ ತೆಂಗು ಅಭಿವೃದ್ದಿ ಮಂಡಳಿಯ ವಂತಿಕೆ 717ರೂ. ಹಾಗೂ ರೈತರ ವಂತಿಕೆ 239 ರೂ.ಗಳನ್ನು ಒಳಗೊಂಡಿರುತ್ತದೆ. ರೈತರು ವಿಮಾ ಕಂತಿನ ವಂತಿಕೆಯನ್ನು ತೆಂಗು ಅಭಿವೃದ್ದಿ ಮಂಡಳಿ (Coconut development board payable at cochin)ಗೆ ಡಿಡಿ ಮೂಲಕ ಅಥವಾ ಆನ್ಲೈನ್ NEFT/ BHIM/Phone pe/ Google pay/Pay- tm ಮೂಲಕ State bank of India, Iyyatti Jn., Ernakulam ಶಾಖೆ(Account No.61124170321, IFSC Code: SBIN0031449)ಗೆ ಪಾವತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.coconut.board.gov.in/ Scheme.aspx#kera suraksha insurance ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.