ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರದವರು ರಾಜ್ಯಮಟ್ಟದ ಆಟೋಗಳ ಸ್ಪರ್ಧೆಯನ್ನು ಆಯೋಜಿಸಿ ಸ್ಪರ್ಧೆಯು ಮೈಸೂರಿನ ಚಾಮುಂಡಿ ಸ್ಟೇಡಿಯಂನಲ್ಲಿ ಆಯೋಜಿತವಾಗಿತ್ತು. ಮೈನಸ್ ಸೊನ್ನೆ 33 ಕೆಜಿ ವಿಭಾಗದಲ್ಲಿ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆ ಹಿರೇಹಳ್ಳಿ ತುಮಕೂರು ತಾಲೂಕು ತುಮಕೂರು ಜಿಲ್ಲೆ ಈ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಅಮೃತ ಶ್ರೀ ಬಿ. ಎನ್. (ಲೇಟ್ ನಾಗರಾಜ್ ಬಿ ಎನ್ ಇವರ ಸುಪುತ್ರಿ ) ಶಾಲಾ ವತಿಯಿಂದ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಕರಾಟೆ ಸ್ಪರ್ಧೆಯಲ್ಲಿಆಯ್ಕೆಯಾಗಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ.
ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀರಾಮಾಂಜನಪ್ಪ ಇವರು ಉತ್ತಮ ತರಬೇತುಗೊಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಶ್ರ ಮಿಸಿರುವುದನ್ನು ಮನಗಂಡು ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ (ವಿದ್ವಾನ್ ಹರಳೂರು ಶಿವಕುಮಾರ) ಇವರು ಅಭಿನಂದಿಸಿರುತ್ತಾರೆ. ಇಂತಹ ಸಾಧನೆಗೈದ ಮಗುವಿಗೆ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ತುಮಕೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತುಮಕೂರು ಜಿಲ್ಲೆಯ ಡಿಡಿಪಿಐ ಆಡಳಿತ ಹಾಗೂ ಅಭಿವೃದ್ಧಿ ಇವರು ಅಭಿನಂದಿಸಿರುತ್ತಾರೆ. ಹಾಗೂ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಯವರು ಅಭಿನಂದಿಸಿರುತ್ತಾರೆ.