ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನ್ಸಿಸಿ ಘಟಕ ಮತ್ತು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಜಂಟಿಯಾಗಿ ರಾಷ್ಟ್ರೀಯ ಎನ್ಸಿಸಿ (ನ್ಯಾಷನಲ್ ಕೆಡೆಟ್ ಕಾಪ್ರ್ಸ್) ದಿನಾಚರಣೆಯನ್ನು ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ ಎಸ್ ರವಿಪ್ರಕಾಶ ಅವರು ಐದು ಸಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಎನ್ಸಿಸಿ ದಿನಾಚರಣೆಯಯನ್ನು ಸರಳವಾಗಿ ನಡೆಸಿಕೊಟ್ಟರು. ಎನ್ಸಿಸಿ ಘಟಕದ ಕ್ಯಾಪ್ಟನ್ ಡಾ.ಎಚ್.ವಿ. ಜಯಪ್ರಕಾಶ್, ಡೀನ್ (ಮಾನವಿಕ) ಪ್ರೊ. ರಾಜಾನಾಯ್ಕ್ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ, ಶ್ವೇತ ಎಂ.ಪಿ. ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.