ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನಲ್ಲಿ ಬರುವ ಜನವರಿಯಲ್ಲಿ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಆಯೋಜಿಸುವ ಸಂಬಂಧ ಎಸ್ಎಸ್ಐಟಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ ಜಿಲ್ಲಾ ಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು ಹಾಗೂ ಪಾಲಿಕೆ ಆಯುಕ್ತರಾದ ಬಿ. ವಿ. ಅಶ್ವಿಜ ಅವರ ಸಮಕ್ಷಮ ಸಮ್ಮೇಳನದ ರೂಪುರೇμÉಯನ್ನು ಮನವರಿಕೆ ಮಾಡಲಾಯಿತು.
ಸಚಿವರಾದ ಡಾ.ಜಿ. ಪರಮೇಶ್ವರ ಅವರು ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸಿ ದಿನಗಳು ಕಡಿಮೆ ಇವೆ. ಭರದಿಂದ ಸಿದ್ಧತೆ ಗಳು ಜರುಗಬೇಕು. ಮುಂದಿನ ವಾರಾಂತ್ಯದಲ್ಲಿ ಸಭೆ ನಡೆಸೋಣಎಂದು ತಿಳಿಸಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ. ನಿ. ಪುರುμÉೂೀತ್ತಮ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ. ಎನ್. ಮಧುಕರ್, ಶಾಂತರಾಜ್,ಡಿ.ಎಂ ಸತೀಶ್ ಉಪಾಧ್ಯಕ್ಷ ಎಲ್. ಚಿಕ್ಕೀರಪ್ಪ, ಕಾರ್ಯ ದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಎಚ್ಎಸ್. ಪರಮೇಶ್, ಜಯಣ್ಣ ಜಯನುಡಿ, ಸುರೇಶ್ ಕಾಗ್ಗೆರೆ, ಸುರೇಶ್ ವತ್ಸ, ಎಸ್. ಹರೀಶ್ ಆಚಾರ್ಯ, ರೇಣುಕಾ ಪ್ರಸಾದ್ ಜಯಣ್ಣ ಬೆಳಗೆರೆ ಇತರರಿದ್ದರು.