ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆಯ ನೂತನ ಜ್ಞಾನಸಿರಿ ಕ್ಯಾಂಪಸ್ಗೆ ಸಾರಿಗೆ ಸೇವೆ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ನಗರ ಬಸ್ ನಿಲ್ದಾಣದಿಂದ ಜ್ಞಾನಸಿರಿ ಕ್ಯಾಂಪಸ್ಗೆ ಬೆಳಿಗ್ಗೆ 8:30, 9, 9:30, 10, 10:30, 11, 11:30, 12, ಮಧ್ಯಾಹ್ನ 1:15, 1:40, 2:45, 3, 3:05, 3:30, 4:10, 4:30 ಗಂಟೆಗೆ ಹಾಗೂ ಜ್ಞಾನಸಿರಿ ಕ್ಯಾಂಪಸ್ನಿಂದ ತುಮಕೂರಿಗೆ ಬೆಳಿಗ್ಗೆ 9:45, 10:15, 10:45, 11:15, 11:45, ಮಧ್ಯಾಹ್ನ 12:15, 12:45, 2, 2:20, 3:30, 3:45, 4, 4:15, 4:55, 5:30 ಗಂಟೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.