ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ನವೆಂಬರ್ 24ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಗುಬ್ಬಿ, ಕಡಬ, ನಿಟ್ಟೂರು ಉಪಸ್ಥಾವರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಪೂರಕಗಳಿಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ನ.25, 27ರಂದು ವಿದ್ಯುತ್ ವ್ಯತ್ಯಯ
ಬೆವಿಕಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಕಾರ್ಯ ಕೈಗೊಂಡಿರುವುದರಿಂದ ನವೆಂಬರ್ 25 ಮತ್ತು 27ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಟನಹಳ್ಳಿ, ಮರಾಠಿ ಪಾಳ್ಯ, ಚಿಂದಿಗೆರೆ, ಎಂ.ಎಂ.ಎ.ಕಾವಲ್, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರಕಸಂದ್ರ, ಚೇಳೂರು ಟೌನ್, ಜಾಲಗುಣಿ, ಅರಿವೇಸಂದ್ರ, ನಿಂಬೆಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ.ಅರಿವೇಸಂದ್ರ, ವಾಟರ್ ಸಪ್ಲೈ ಫೀಡರ್, ನಲ್ಲೂರು, ಕೊಡಿಯಾಲ, ಹೊಸಕೆರೆ, ಹಾಗಲವಾಡಿ, ಅಳಿಲಘಟ್ಟ, ಹೂವಿನಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ, ಸೋಮಲಾಪುರ, ಬೋಗಸಂದ್ರ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಗುಡ್ಡೇನಹಳ್ಳಿ, ಗೊಲ್ಲಹಳ್ಳಿ, ಕುರಿಕೆಂಪನಹಳ್ಳಿ, ನೆಲಹಾಳ್, ಮಜ್ಜಿಗೆ ಕೆಂಪನಹಳ್ಳಿ, ಮುದ್ದೇನಹಳ್ಳಿ, ಲಿಂಗನಹಳ್ಳಿ, ಚನ್ನೇನಹಳ್ಳಿ, ಮಶಣಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಬ್ಯಾಟರಿ ಸರಬರಾಜು : ಟೆಂಡರ್ ಆಹ್ವಾನ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಜಿಲ್ಲೆಯ ಆಯ್ದ 8 ಪದವಿ ಪೂರ್ವ ಕಾಲೇಜುಗಳಿಗೆ ಎಲ್.ಇ.ಡಿ ಡಿಸ್ಪ್ಲೇ ಮತ್ತು 2ಕೆವಿ ಯು.ಪಿ.ಎಸ್(ಬ್ಯಾಟರಿ ಸಹಿತ)ಗಳನ್ನು ಖರೀದಿಸಿ ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿದೆ.
ಆಸಕ್ತರು ನವೆಂಬರ್ 28ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಟೆಂಡರ್ಗೆ ಸಂಬಂಧಿಸಿದ ವಿವರಗಳನ್ನು ಜಾಲತಾಣ hಣಣಠಿs://ಞಠಿಠಿಠಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಚೇರಿ ಅಥವಾ ದೂರವಾಣಿ ಸಂಖ್ಯೆ 0816-2272929, 9448999380ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.