ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 3 ಪ್ರತ್ಯೇಕ ಕಾಣೆ ಪ್ರಕಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಪ್ರಕರಣ-1 :- ಗುಬ್ಬಿ ತಾಲ್ಲೂಕು ಯಲಚಿಹಳ್ಳಿಯ ಸುಮಾರು 38 ವರ್ಷದ ಯೋಗೀಶ್ ಬಿನ್ ನಾಗಪ್ಪ ಎಂಬ ವ್ಯಕ್ತಿಯು ಏಪ್ರಿಲ್ 8ರಂದು ಮನೆಯಿಂದ ಹೋದವನು ಮರಳಿ ಬಂದಿಲ್ಲವೆಂದು ಈತನ ಪತ್ನಿ ಶ್ವೇತ ಠಾಣೆಗೆ ದೂರು ನೀಡಿದ್ದಾಳೆ. ಈತನು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ.
ಪ್ರಕರಣ-2 :- ಗುಬ್ಬಿ ತಾಲ್ಲೂಕು ಮೂಡ್ಲಗಿರಿಯನಪಾಳ್ಯದ ದಾಸೇಗೌಡ ಬಿನ್ ಕೃಷ್ಣಪ್ಪ ಎಂಬ ಸುಮಾರು 58 ವರ್ಷದ ವ್ಯಕ್ತಿಯು ನವೆಂಬರ್ 20ರಿಂದ ಕಾಣೆಯಾಗಿದ್ದಾನೆ. ಈತನು ಮಾನಸಿಕ ಅಸ್ವಸ್ಥನಾಗಿದ್ದು, 5.6 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಅರ್ಧ ತೋಳಿನ ಹಳದಿ ಹಸಿರು ಮಿಶ್ರಿತ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.
ಪ್ರಕರಣ-3 :- ಗುಬ್ಬಿ ಟೌನ್ ಮಾರನಕಟ್ಟೆಯ ಸುಮಾರು 40 ವರ್ಷದ ರಮೇಶ್ ಬಿನ್ ಸಣ್ಣರಾಮಯ್ಯ ಎಂಬ ವ್ಯಕ್ತಿಯು ಸೆಪ್ಟೆಂಬರ್ 4 ರಿಂದ ಕಾಣೆಯಾಗಿದ್ದಾನೆ ಎಂದು ಈತನ ಪತ್ನಿ ರೇಣುಕಮ್ಮ ಠಾಣೆಗೆ ದೂರು ನೀಡಿದ್ದಾಳೆ. ಈತನು 5.7 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ.
ಕಾಣೆಯಾದ ಇವರುಗಳ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ದೂ.ವಾ.ಸಂ. 0816-2272451, 08131-22229/ 222210, ಮೊ.ಸಂ. 9480802959ನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.