ಅಟಲ್ ಜೀ ಜನಸ್ನೇಹಿ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ಅವಧಿಗೂ ಮುನ್ನವೇ ವಿಲೇವಾರಿ ಮಾಡುವ ಮೂಲಕ ರಾಜ್ಯ ಶ್ರೇಯಾಂಕದಲ್ಲಿ ಜಿಲ್ಲೆಯು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಅಟಲ್ ಜೀ ಜನಸ್ನೇಹಿ ಯೋಜನೆಯಡಿ 2024ರ ಅಕ್ಟೋಬರ್ 26 ರಿಂದ ಈವರೆಗೆ ನಾಡ ಕಚೇರಿಗಳಲ್ಲಿ ಸಾರ್ವಜನಿಕರು ಸಲ್ಲಿಸಿದ್ದ 30,955 ಅರ್ಜಿಗಳನ್ನು ಅವಧಿಗೂ ಮುನ್ನ ವಿಲೇವಾರಿ ಮಾಡಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ಜಿಲ್ಲೆಯು ರಾಜ್ಯ ಮಟ್ಟದ ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿತ್ತು. ನಿರಂತರವಾಗಿ ಅಟಲ್ ಜೀ ಜನಸ್ನೇಹಿ ಯೋಜನೆಯ ಪ್ರಗತಿ ಪರಿಶೀಲನೆಯನ್ನು ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ದೊರೆತಿರುವುದು ಸಂತಸ ತಂದಿದೆ.
ಅಟಲ್ ಜೀ ಜನಸ್ನೇಹಿ ಯೋಜನೆಯಡಿ ನಾಡ ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಗೇಣಿರಹಿತ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ, ಮರುವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ, ಮೃತರ ಕುಟುಂಬ ಸದಸ್ಯರ ದೃಢೀಕರಣ ಪತ್ರ, ವ್ಯವಸಾಯಗಾರ ದೃಢೀಕರಣ ಪತ್ರ, ಸಣ್ಣ /ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ, ಬೋನಫೈಡ್ ದೃಢೀಕರಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಕುಟುಂಬ ವಂಶವೃಕ್ಷ ದೃಢೀಕರಣ ಪತ್ರ, ಅಂಗವಿಕಲ ಪೆÇೀಷಣಾ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಮೈತ್ರಿ, ಮನಸ್ವಿನಿ ಸೇರಿದಂತೆ 42 ವಿವಿಧ ಸೇವೆಗಳಡಿ ಸ್ವೀಕೃತವಾದ ಎಲ್ಲಾ 30,955 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಜಿಲ್ಲೆಯು ಪ್ರಥಮ ಸ್ಥಾನ ಗಳಿಸಿದೆ.
ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಳ್ಳಲು ಶ್ರಮಿಸಿದ ಟಾಪ್ 5 ತಾಲ್ಲೂಕುಗಳ ತಹಶೀಲ್ದಾರರಾದ ಚಿಕ್ಕನಾಯಕನಹಳ್ಳಿಯ ಕೆ.ಪುರಂದರ, ಕೊರಟಗೆರೆಯ ಕೆ.ಮಂಜುನಾಥ್, ತಿಪಟೂರಿನ ಎಸ್. ಪವನ್ಕುಮಾರ್, ಕುಣಿಗಲ್ನ ರಶ್ಮಿ, ಮಧುಗಿರಿ ತಾಲ್ಲೂಕಿನ ಶಿರಿನ್ ತಾಜ್, ಗ್ರೇಡ್-2 ತಹಶೀಲ್ದಾರ್, ಉಪತಹಶೀಲ್ದಾರ್, ಹೋಬಳಿ ವ್ಯಾಪ್ತಿಯ ರಾಜಸ್ವ ನಿರೀಕ್ಷಕರು, ನಾಡಕಛೇರಿ ವಿಷಯ ನಿರ್ವಾಹಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.