ಕುಣಿಗಲ್ ತಾಲೂಕು ಎಡೆಯೂರಿನ ದೇವಸ್ಥಾನದ ಆವರಣದಲ್ಲಿ ಇದೇ ತಿಂಗಳ 28 ರಂದು ಸಂಜೆ 6.30 ಕ್ಕೆ ಚಾರು ವಸಂತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮೂಡಬಿದರೆ ಆಳ್ವಾಸ ರಂಗ ಅಧ್ಯಯನ ಕೇಂದ್ರದವರು ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.
ಹಂಪನಾ ಅವರ ದೇಸಿ ಮಹಾಕಾವ್ಯವನ್ನು ಖ್ಯಾತ ನಾಟಕಕಾರ ಡಾ. ನಾ. ದಾಮೋದರಶೆಟ್ಟಿ ಅವರ ರಂಗ ರೂಪದ ಈ ನಾಟಕವನ್ನು ಜೀವನ್ ರಾಮ್ ಸುಳ್ಯನಿರ್ದೇಶಿಸಿದ್ದಾರೆ.
ಸಾನಿಧ್ಯವನ್ನು ರಂಭಾಪುರಿ ಬಾಳೆಹೊನ್ನೂರು ಖಾಸಾ ಶಾಖಾಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ನಾಟಕ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ನಾ. ದಾಮೋದರ ಶೆಟ್ಟಿ, ಶ್ರೀನಿವಾಸ ಜಿ. ಕಪ್ಪಣ್ಣ, ಎಡೆಯೂರು ಗ್ರಾ.ಪಂ. ಅಧ್ಯಕ್ಷರಾದ ಮಲ್ಲಿಗಮ್ಮ, ಉಪಾಧ್ಯಕ್ಷ ಲಕ್ಷ್ಮಣ್, ಚಾಕೇನಹಳ್ಳಿ ಒಲೆಊಟದ ಸಂಪತ್, ವೈ.ಆರ್. ಭಕ್ತಕುಚೇಲ, ಎಡೆಯೂರು ಶ್ರೀ ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಮಹೇಶ್ ಆಗಮಿಸಲಿದ್ದಾರೆ. ಈ ನಾಟಕವನ್ನು ಕಮಲಾ ಹಂಪನಾಗೆ ಸಮರ್ಪಿಸಲಾಗುವುದು ಎಂದು ಸಂಚಾಲಕ ವೈ.ಎಸ್. ಹನುಮಂತಯ್ಯ ತಿಳಿಸಿದ್ದಾರೆ.