ವಿಶ್ವದಲ್ಲಿ ಭಾರತವು ಅತೀ ದೊಡ್ಡ ಸ್ಮಾರ್ಟ್ಫೋನ್ ಉತ್ಪಾದನಾ ದೇಶವಾಗಿ ಹೊರಹೊಮ್ಮಿದೆ. ಶೇ 40ರಷ್ಟು ಯುಪಿಐ ವಹಿವಾಟು ಇದರಿಂದ ಹೆಚ್ಚಾಗಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಟಿಜಿಟಲ್ ವಹಿವಾಟು ನಡೆಸುತ್ತಿರುವುದರಿಂದ ಹಣಕಾಸಿನ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಮ್ ತಿಳಿಸಿದರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 13 ನೇ ಘಟಿಕೋತ್ಸವದ ಭಾಷಣದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಸಹಾಯದಿಂದ ಪ್ರತಿಯೊಂದು ಮೂಲೆಯಲ್ಲಿಯೂ ಯುಪಿಐ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಯುಪಿಐ ವಹಿವಾಟು, ಅತೀ ಹೆಚ್ಚು ಮೊಬೈಲ್, ಇಂಟರ್ನೆಟ್ ಬಳಕೆದಾರರು, ಹಣಕಾಸು ಸಾಕ್ಷರತೆ ಈ ಎಲ್ಲಾ ಕಾರಣಗಳಿಂದ 2035ರ ವೇಳೆಗೆ ಭಾರತ ವಿಶ್ವಗುರುವಾಗಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿದವರಿಗೆ ಉದ್ಯೋಗಾವಕಾಶಗಳು ಹೆಚ್ಚಿದ್ದು, ಹೊಸ ಆವಿಷ್ಕಾರಗಳಿಗೆ ಇದು ಮುನ್ನುಡಿಯಾಗಲಿದೆ ಎಂದರು.
ಶೇ.40ರಷ್ಟು ಕೋರ್ಸ್ಗಳು ಆನ್ಲೈನ್ ಮತ್ತು ಡಿಜಿಟಲ್ ಕಲಿಕೆ ಆಧಾರಿತವಾಗಿದ್ದು, ಶಿಕ್ಷಕರು ಕೂಡ ಅದಕ್ಕೆ ಹೊಂದಿಕೊಂಡು ಬದಲಾಗಬೇಕಿದೆ. ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿರುವುದರಿಂದ ಶಿಕ್ಷಕರು ಸಹ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಭಾರತದಲ್ಲಿ 4.33 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಅದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಇತ್ತೀಚೆಗೆ ಮನೆಯಲ್ಲಿಯೇ ಕುಳಿತು ಆರ್ಥಿಕ ವ್ಯವಹಾರಗಳನ್ನು ನಡೆಸುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಭಾರತ ಮುಂದಿದೆ. ಇಸ್ರೋ ಸಂಸ್ಥೆಯ ಚಂದ್ರಯಾನ ಉಡಾವಣೆಯಲ್ಲಿ ಶೇ.30ರಷ್ಟಿದ್ದ ಮಹಿಳಾ ಇಂಜಿನಿಯರ್ಗಳ ಪಾತ್ರ ಪ್ರಮುಖವಾಗಿತ್ತು. ಮಹಿಳೆ ತನ್ನ ಸುತ್ತಮುತ್ತಲ ವಾತಾವರಣವನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾಳೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳನ್ನು ಹೊಂದಿದ್ದ ವಿಶ್ವವಿದ್ಯಾಲಯಗಳು/ಕಾಲೇಜುಗಳು ಬಹುಶಿಸ್ತೀಯ ಕೋರ್ಸ್ಗಳನ್ನು ಅಳವಡಿಸಿಕೊಳ್ಳುವುದರಿಂದ ಹೊಸ ಆವಿಷ್ಕಾರಗಳನ್ನು ಹೊರ ತರಬಹುದು ಎಂದರು.
13ನೇ ಸಾಹೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ನಿಕಟಪೂರ್ವ ರಾಜ್ಯಪಾಲರು ಆದ ಕರ್ನಾಟಕದ ಶ್ರೀಮತಿ ಮಾರ್ಗರೆಟ್ ಆಳ್ವ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪಸರಿಸಲಿ, 100ರ ಗಡಿ ದಾಟಿ ಮುನ್ನಡೆಯಲಿ. ಇದೇ ಸಂದರ್ಭದಲ್ಲಿ ಅವರು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ತಮ್ಮ ಸ್ವಾನುಭವದ ಮೂಲಕ ವೃತ್ತಿ ಬದುಕಿನಲ್ಲಿ ವಿದ್ಯಾರ್ಥಿಗಳು ಹೇಗೆ ಇರಬೇಕು ಎಂದು ಸಲಹೆ ನೀಡಿದರು.
ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿದರು. ಡಾಕ್ಟರೇಟ್ ಪದವಿ-24, ಇಂಜಿನಿಯರಿಂಗ್-601 ವೈದ್ಯಕೀಯ-147,, ದಂತ ವೈದ್ಯಕೀಯ-49 ಸೇರಿದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು
ವಿತರಿಸಿದರು. ಸಾಹೇ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ಅವರು ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು.
ಘಟಿಕೋತ್ಸವದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಕುಲಸಚಿವರಾದ ಡಾ.ಎಂ.ಝೆಡ್ ಕುರಿಯನ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಬೇಗೂರು ಶ್ರೀ ಸಿದ್ಧಾರ್ಥ ವೈದ್ಯಕೀಯ ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿವಾಕರ್, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್, ಉಪ ಕುಲಸಚಿವರು ಆದ ಡಾ.ಸುದೀಪ್ ಕುಮಾರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ, ಅವಲಾನ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶೌಕತ್ ಫತೇ, ಸಾಹೇ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ್ಯಾಂಕ್ ಪಡೆದವರ ಪ್ರತಿಕ್ರಿಯೆ:
ಐ ಎಸ್ ವಿಭಾಗದಲ್ಲಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದ್ದು ಮತ್ತು ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿರುವುದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ. ಸಿದ್ದಾರ್ಥ ಕಾಲೇಜಿನಲ್ಲಿ ಅಧ್ಯಾಪಕರು ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡುವುದರ ಮೂಲಕ ಪೆÇ್ರೀತ್ಸಾಹಿಸಿದ ಕಾರಣ ಚಿನ್ನದ ಪದಕವನ್ನು ಪಡೆಯಲು ಸಹಾಯವಾಯಿತು ಆದ ಕಾರಣ ನನ್ನೆಲ್ಲಾ ಅಧ್ಯಾಪಕರಿಗೂ, ನನ್ನ ತಂದೆ ತಾಯಿಗಳಿಗೂ ನನ್ನ ಸ್ನೇಹಿತರಿಗೂ ನಾನು ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ.
– ಕೌಶಿಕ್, ವಿದ್ಯಾರ್ಥಿ, ಐಎಸ್ ವಿಭಾಗ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ,
ಎಂಬಿಬಿಎಸ್ ವಿದ್ಯಾರ್ಥಿಯಾಗಿ ನಾನು ಚಿನ್ನದ ಪದಕವನ್ನು ಪಡೆದಿರುವುದು ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ಇದು ನನ್ನ ತಂದೆ-ತಾಯಿಗಳ ಆಶೀರ್ವಾದದ ಪ್ರತಿಫಲ.
-ರಾಹುಲ್, ವಿದ್ಯಾರ್ಥಿ, ವೈದ್ಯಕೀಯ ವಿಭಾಗ, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ
876 ವಿದ್ಯಾರ್ಥಿಗಳಿಗೆ ಪದವಿ: 10 ಮಂದಿಗೆ ಚಿನ್ನದ ಪದಕ
- ವೈದ್ಯಕೀಯ-01 * ದಂತ ವೈದ್ಯಕೀಯ- 02 *ಎಂಜಿನಿಯರಿಂಗ್-06 *ಎಂಸಿಎ-01
ಸೇರಿದಂತೆ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ.
ರ್ಯಾಂಕ್ ವಿವರಗಳು:
ಇಂಜಿನಿಯರಿಂಗ್,ವೈದ್ಯಕೀಯ, ದಂತ ವೈದ್ಯಕೀಯ, ಪಿಎಚ್.ಡಿ ಸೇರಿದಂತೆ ಒಟ್ಟು 876 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಚಿನ್ನದ ಪದಕ ಪಡೆದ ವಿಭಾಗಗಳ ವಿವರ-
ಇಂಜಿನಿಯರಿಂಗ್- 06
ವೈದ್ಯಕೀಯ-1
ದಂತ ವೈದ್ಯಕೀಯ-2
ಎಂಸಿಎ-01
ಒಟ್ಟು ಪದವಿಗಳು:
ಡಾಕ್ಟರೇಟ್ ಪದವಿ-24,
ಇಂಜಿನಿಯರಿಂಗ್-601
ವೈದ್ಯಕೀಯ-147,
ದಂತ ವೈದ್ಯಕೀಯ-49 ಸೇರಿದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ವಿತರಿಸಲಾಯಿತು
ಅತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳು.
ಇಂಜಿನಿಯರಿಂಗ್-01
ವೈದ್ಯಕೀಯ-01,
ದಂತ ವೈದ್ಯಕೀಯ-01