
ಮಧುಗಿರಿಯಲ್ಲಿ ಇತ್ತೀಚೆಗೆ ನಡೆದ ಮಧುಗಿರಿ ಪುರಸಭೆಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎಂದು ಮಧುಗಿರಿ ವಲಯದಲ್ಲಿ ಕೇಳಿ ಬರುತ್ತಿದೆ. ಹರಾಜು ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಸುದ್ದಿ ಎಲ್ಲರ ಕಿವಿಗೆ ಬಿದ್ದಿದೆ. ಇದರ ಸತ್ಯಾಸತ್ಯತೆಗಳ ಕುರಿತು ಅಧಿಕಾರಿಗಳು ತುಮಕೂರಿನ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕಾಗಿದೆ.
ಹರಾಜು ಪ್ರಕ್ರಿಯೆಗೆ ಪಾಲ್ಗೊಳ್ಳಲು ಮೊದಲು ಎನ್ಓಸಿ ಹಾಕಬೇಕು ಎಂದು ಷರತ್ತು ವಿಧಿಸಿ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಈಗ ಎನ್ಓಸಿ ಕಡ್ಡಾಯ ಇಲ್ಲ ಎಂಬ ಹೇಳಿಕೆಗಳನ್ನು ಹೇಳುತ್ತಿದ್ದಾರೆ . ಇದಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದ್ದವರು ಪ್ರಶ್ನೆ ಮಾಡಿದ್ದಕ್ಕೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಎನ್ಓಸಿ ಕೇಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೂ ಕಛೇರಿಗೆ ಬಂದ ಸುಮಾರು 100ಕ್ಕೂ ಅಧಿಕ ಎನ್ಓಸಿ ಅರ್ಜಿಗಳಿಗೆ ಎನ್ಓಸಿಯನ್ನು ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕಡ್ಡಾಯ ಇಲ್ಲ ಎಂಬುದಾದರೆ ಸಾರ್ವಜನಿಕರಿಗೆ ಆಗಲೇ ಮಾಹಿತಿ ನೀಡದೇ ಹರಾಜು ಪ್ರಕ್ರಿಯೆಯ ನಂತರ ಹೇಳಿರುವುದು ಎಷ್ಟು ಸರಿ. ಅಲ್ಲದೇ ಇದರ ಕುರಿತು ಯಾವುದೇ ಮಾಹಿತಿಯನ್ನು ಷರತ್ತಿನಲ್ಲಿಯೂ ಕೂಡ ತಿಳಿಸಿಲ್ಲ. ಅಲ್ಲದೇ ಮಳಿಗೆಗಳನ್ನು ಹೊಂದಿರುವವರಿಗೆ ಮಾತ್ರ ಎನ್ಓಸಿ ಕೇಳಲಾಗಿದೆ ಎಂದೂ ಸಹ ಹೇಳುತ್ತಿದ್ದಾರೆ. ಪುರಸಭೆಯ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ನಡದಿದೆ ಎನ್ನಲಾಗಿರುವ ಭ್ರಷ್ಟಾಚಾರದ ಬಗ್ಗೆ ದಿನಾಂಕ:28/11/2024 ರಂದು ನಡೆದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ/ಪ.ಪಂಗಡದ ಕುಂದುಕೊರತೆ ಸಭೆಯಲ್ಲಿ ಮಧುಗಿರಿಯ ಡಿಎಸ್ಎಸ್ ಸಂಚಾಲಕ ಎಮ್.ವೈ ಶಿವಕುಮಾರ್ ಎಂಬುವವರು ಯೋಜನಾಧಿಕಾರಿಗಳನ್ನು ಕುರಿತು ವೇದಿಕೆಯಲ್ಲಿಯೇ ನಿಮಗೂ 15 ಲಕ್ಷಗಳನ್ನು ವಸೂಲಿ ಮಾಡಿ ನೀಡಿದ್ದಾರೆ ಎಂದು ಮಧುಗಿರಿಯಲ್ಲಿ ಕೇಳಿ ಬರುತ್ತಿದೆ ಎಂದು ಎಂದು ಆರೋಪ ಮಾಡಿದ್ದಾರೆ. ಈ ಗಂಭೀರ ಆರೋಪವನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಂಡು ಮಧುಗಿರಿ ಪುರಸಭೆ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೇ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಾರೋ? ಇಲ್ಲವೋ? ಎಂದು ಕಾದು ನೋಡಬೇಕಾಗಿದೆ.
ಪುರಸಭೆಯ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎನ್ನುವ ಆರೋಪಗಳು ನಗರದಾದ್ಯಂತ ಕೇಳಿ ಬರುತ್ತಿರುವುದರಿಂದ ಮಾನ್ಯ ಸಹಕಾರ ಸಚಿವರು ಈ ಆರೋಪಗಳ ಬಗ್ಗೆ ತನಿಖೆ ಮಾಡಲು ಆದೇಶಿಸಿ ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಮುಂದಿನ ದಿನಗಳಲ್ಲಿ ಬಹಿರಂಗ ಹರಾಜು ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ಜಿಲ್ಲಾಧಿಕಾರಿಗಳ ಸಭೆಯಲ್ಲೇ ಮಧುಗಿರಿ ಪುರಸಭೆ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆದಿದೆ ಎನ್ನಲಾಗಿದ್ದು ವೇದಿಕೆ ಮೇಲೆಯೇ ಯೋಜನಾಧಿಕಾರಿಗೂ 15 ಲಕ್ಷ ವಸೂಲಿ ಮಾಡಿ ನೀಡಲಾಗಿದೆ ಎಂಬ ಆರೋಪಗಳು ಸಭೆಯಲ್ಲೇ ವ್ಯಕ್ತವಾಗಿರುವುದರಿಂದ ತುಮಕೂರಿನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಕಲ್ಯಾಣ್ ರವರು ಈಗ ನಡೆದಿರುವ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಈ ಹರಾಜಿನಲ್ಲಿ ನಡೆದಿದೆ ಎನ್ನಲಾದ ಗೋಲ್ಮಾಲ್ ಬಗ್ಗೆ ತನಿಖೆಗೆ ಆದೇಶ ನೀಡುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಾಗಿದೆ.