
ಉತ್ತರ ಕರ್ನಾಟಕದ ದಾಂಡೇಲಿಯಲ್ಲಿರುವ ಜಂಗಲ್ ಲಾಡ್ಜ್ ರೆಸಾರ್ಟ್ಸ್ ಕಾಳಿ ಅಡ್ವೆಂಚರ್ ಕ್ಯಾಂಪ್ ನಲ್ಲಿ ಕರ್ನಾಟಕ ಸರ್ಕಾರದ ಉರ್ದು ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಉರ್ದು ಪತ್ರಕರ್ತರಿಗೆ ನವಂಬರ್ 19, 20, 21, ಮೂರು ದಿನಗಳ ಕಾರ್ಯಗಾರ ನಡೆಯಿತು, ತುಮಕೂರಿನ ಪತ್ರಕರ್ತರಾದ ಸೈಯದ್ ಯೂಸುಫ್ ಉಲ್ಲಾ ಅವರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಮುಹಮ್ಮದ್ ಅಲಿಖಾಜಿ ರವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅಜಂ ಶಾಹಿದ್, ಅನೀಸ್ ಸಿದ್ದಿಕಿ, ಶಾಹಿದ್ ಖಾಝಿ, ಹೈದ್ರಾಬಾದಿನ ಪ್ರೊಫೆಸರ್ ಎಹ್ತೇಷಾಮ್ ಅಹಮದ್, ಮುಹಮ್ಮದ್ ಫಾರಿಯಾದ್ ಸೇರಿದಂತೆ ಉರ್ದು ಅಕಾಡೆಮಿಯ ಸದಸ್ಯರು ಮತ್ತು ವಿವಿಧ ಜಿಲ್ಲೆಯ ಪತ್ರಕರ್ತರು ಇದ್ದರು.