ಕರ್ನಾಟಕ ರಾಜ್ಯ ಪೆÇಲೀಸ್ 12ನೇ ಪಡೆ ಕೆ.ಎಸ್.ಆರ್.ಪಿ ವತಿಯಿಂದ ಜಿಲ್ಲೆಯ ಕೊರಟಗೆರೆ ತಾಲ್ಲೂಕು ತುಂಬುಗಾನಹಳ್ಳಿಯಲ್ಲಿರುವ 12ನೇ ಪಡೆ, ಕೆ.ಎಸ್.ಆರ್.ಪಿ. ಕ್ರೀಡಾ ಮೈದಾನದಲ್ಲಿ ನವೆಂಬರ್ 26 ಹಾಗೂ 27ರಂದು ವಾರ್ಷಿಕ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ ಎಂದು 12ನೇ ಪಡೆ ಕೆಎಸ್ಪಿಎಸ್ ಕಮಾಂಡೆಂಟ್ ಹಂಜಾ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ಕೂಟವನ್ನು ನವೆಂಬರ್ 26ರ ಬೆಳಿಗ್ಗೆ 9ಗಂಟೆಗೆ ಉದ್ಘಾಟಿಸಲಾಗುವುದು. ಬೆಂಗಳೂರು ಕರ್ನಾಟಕ ರಾಜ್ಯ ಮೀಸಲು ಪೆÇಲೀಸ್ ಬಸವರಾಜ ಜಿಳ್ಳೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಭಾಗವಹಿಸಲಿದ್ದಾರೆ.
ಮರುದಿನ ನವೆಂಬರ್ 27ರ ಸಂಜೆ 4:30ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೇರಿದಂತೆ ಗಣ್ಯರು, ಪೆÇಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.