ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತುಮಕೂರು ವಿಭಾಗದ ಸಾರಿಗೆಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ಚಿಲ್ಲರೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ.
ಇನ್ನು ಮುಂದೆ ತುಮಕೂರು ವಿಭಾಗದ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿರ್ವಾಹಕರಿಂದ ಡೈನಮಿಕ್ ಯು.ಪಿ.ಐ ಕ್ಯೂ.ಆರ್ ಕೋಡ್ ಮೂಲಕ ಡಿಟಿಟಲ್ ಪಾವತಿ ಮಾಡಿ ಟಿಕೇಟ್ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.