ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನವೆಂಬರ್ 30ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ 2024-25ನೇ ಸಾಲಿನ ತುಮಕೂರು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷದೊಳಗಿರುವ ವಿವಿಧ ಸಂಘ ಸಂಸ್ಥೆಗಳ ಯುವಕ/ಯುವತಿಯರು ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ವಿಷಯಾಧಾರಿತ ಸ್ಪರ್ಧೆ; ಸಾಂಸ್ಕøತಿಕ ಸ್ಪರ್ಧೆಯಡಿ ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಜನಪದ ನೃತ್ಯ(ತಂಡ/ವೈಯಕ್ತಿಕ) ಹಾಗೂ ಜನಪದ ಗೀತೆ(ತಂಡ/ವೈಯಕ್ತಿಕ); ಜೀವನ ಕೌಶಲ್ಯ ಸ್ಪರ್ಧೆಯಡಿ ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಕವಿತೆ ಬರೆಯುವುದು(ವೈಯಕ್ತಿಕ-1000 ಪದಗಳಿಗೆ ಮೀರದಂತೆ), ಕಥೆ ಬರೆಯುವುದು(1000 ಪದಗಳಿಗೆ ಮೀರದಂತೆ), ಚಿತ್ರಕಲೆ(ಂ3 ಅಳತೆ-11.7”x16.5”), ಭಾಷಣ ಸ್ಪರ್ಧೆ(ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿರಬೇಕು) ನಡೆಯಲಿದೆ.
ಸ್ಪರ್ಧೆಯೊಂದಿಗೆ ಗುಡಿ ಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ/ಜವಳಿ, ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವಿನ್ಯತೆ ವಿಷಯದಡಿ ಪೂರಕ ಪರಿಕರ/ ಉಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸ್ಪರ್ಧಾಳುಗಳು ತಮ್ಮ ವಯಸ್ಸಿನ ದೃಡೀಕರಣ ಪತ್ರ, ಆಧಾರ್ ಕಾರ್ಡ್, 1 ಭಾವಚಿತ್ರ, ಐ.ಎಫ್.ಎಸ್. ಕೋಡ್ ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತಿಯುಳ್ಳ ಸಂಘ-ಸಂಸ್ಥೆಗಳ ಯುವಕ/ಯುವತಿಯರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ನವೆಂಬರ್ 30ರಂದು ಬೆಳಿಗ್ಗೆ 9 ಗಂಟೆಗೆ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು(ಮಂಜುನಾಥ್-ಮೊ.ಸಂ. 9741691379) ಅವರಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.