
ತುಮಕೂರು(ಕ.ವಾ.)ನ.29: ಸ್ವ ಘೋಷಿತ ರಾಷ್ಟ್ರೀಯ ಭಾಷೆ ಎಂದು ಹೇಳಲಾಗುವ ಹಿಂದಿ ಎಂಬ ಘಟ ಸರ್ಪವು ಕನ್ನಡವನ್ನು ನುಂಗಲು ಬಿಡಬಾರದು ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ: ಅಗ್ರಹಾರ ಕೃಷ್ಣಮೂರ್ತಿ ಕರೆ ಕೊಟ್ಟರು.
ನಗರದ ಅಮಾನಿಕೆರೆಯಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು ಅವರು, ಭಾರತದಲ್ಲಿ 11 ಭಾμÉಗಳಿಗೆ ಶಾಸ್ತ್ರೀಯ ಸ್ಥಾನಮಾನ ಪಡೆದರೂ ಸಹ ಹಿಂದಿಯನ್ನು ರಾಷ್ಟ್ರೀಯ ಭಾμÉ ಎಂದು ಬಿಂಬಿಸಲಾಗುತ್ತಿದೆ. ಎಲ್ಲರಿಗೂ ಅವರವರ ಮಾತೃ ಭಾμÉ ಮಹತ್ವ ವಾದುದು. ನಮ್ಮ ಭಾμÉಯನ್ನು ನಾವು ಪ್ರೀತಿಸಿದಾಗ ಮಾತ್ರ ಭಾμÉ ಉಳಿಯುತ್ತದೆ ಎಂದು ತಿಳಿಸಿದರು.
ಬಹು ಭಾಷಿಕ, ಬಹು ಸಂಸ್ಕøತಿ, ಬಹು ಸಂಪ್ರದಾಯಗಳನ್ನು ಹೊಂದಿರುವ ದೇಶದಲ್ಲಿ ಕನ್ನಡ ಭಾμÉಗೆ ತನ್ನದೇ ಆದ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಾಡು-ನುಡಿಗಾಗಿ ಹೋರಾಡಿದ ಹೋರಾಟಗಾರರ ಶ್ರಮವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದರು.
ಅಭಿವ್ಯಕ್ತಿಗೆ ಧಕ್ಕೆ.

ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಲೇಖಕರು, ಸಾಹಿತಿಗಳು, ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸಲೂ ಸಹ ತೊಡಕುಗಳು ಉಂಟಾಗುತ್ತಿವೆ ಎಂದು ಸಮ್ಮೇಳನಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಕನ್ನಡ ಭಾμÉಯಲ್ಲಿ ಇತರೆ ಭಾμÉಗಳಿಗಿಂತ ಹೆಚ್ಚು ವೈಚಾರಿಕತೆ ಮತ್ತು ವೈಜ್ಞಾನಿಕತೆ ಬಗ್ಗೆ ಸಾಹಿತ್ಯಗಳು ರಚನೆಯಾಗಿರುವುದೇ ಕನ್ನಡ ಭಾμÉಯ ಸವಾರ್ಂಗೀಣ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನಗಳು ಆಡಂಬರಕ್ಕಿಂತ ಅರ್ಥಪೂರ್ಣವಾದಾಗ ಜನರನ್ನು ತಲುಪಲು ಸಾಧ್ಯ – ಡಾ: ಬರಗೂರು ರಾಮಚಂದ್ರಪ್ಪ
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆ, ದಲಿತ, ರೈತ, ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯಕೇಂದ್ರಿತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳನ್ನು ಚರ್ಚಿಸುವ ಮೂಲಕ ಕನ್ನಡದ ವಿವೇಕವನ್ನು ವಿಸ್ತರಿಸುವ ಕೆಲಸವಾಗಬೇಕೆಂದು ಸಾಹಿತಿ ಡಾ: ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮಗ್ರವಾದದು. ಕನ್ನಡ ಸಾಹಿತ್ಯದ ವಿವೇಕ ಬಹಳ ವಿಸ್ತಾರವಾದದು. ಮಾನವೀಯತೆ ಬದಲು ಮತೀಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಇಂದಿನ ದಲಿತ, ಬಂಡಾಯ ಸಾಹಿತ್ಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ. ಅದನ್ನು ಜನಸಾನಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಇಂತಹ ಸಮ್ಮೇಳನಗಳ ಮೂಲಕ ಆಗಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಭಾμÉ ಧಾರ್ಮಿಕ, ರಾಜಕೀಯ, ಸಾಹಿತ್ಯಿಕ, ಸಾಮಾಜಿಕ, ಆರ್ಥಿಕ ವಿವೇಕಗಳನ್ನು ಕಲ್ಪಿಸಿರುವ ಭಾμÉಯಾಗಿದೆ. ಕನ್ನಡ ಸಾಹಿತ್ಯದ ವಿವೇಕ ಬಹಳ ಪ್ರಾಚೀನವಾಗಿದ್ದು, ಪಂಪ-ರನ್ನರ ಕಾಲದಿಂದಲೂ ಹಲವು ವಿಷಯಗಳ ಕುರಿತು ಚರ್ಚಿಸಿಕೊಂಡು ಬರಲಾಗುತ್ತಿದೆ. ಕನ್ನಡ ಸಾಹಿತ್ಯವು ಜನಪದ, ಸಂಸ್ಕøತಿ ಸೇರಿದಂತೆ ಸ್ಥಳೀಯ, ಪ್ರಾದೇಶೀಕ, ರಾಷ್ಟ್ರೀಯ, ಅಂತರಾಷ್ಟ್ರ್ರೀಯ ಮಟ್ಟದ ವಿಚಾರಗಳನ್ನು ಒಳಗೊಂಡಿದೆ ಎಂದರು.
ಜನಸಾಮಾನ್ಯರ ಬಗ್ಗೆ ಗೌರವ ಇದ್ದಾಗ ಮಾತ್ರ ಸಾಹಿತ್ಯ ಉತ್ಕøಷ್ಟವಾಗಿರುತ್ತದೆ. ಬರೆಯದವರ ಬಗ್ಗೆ ಬರೆಯುವವರು ಗೌರವ ಹೊಂದಿದಾಗ ಮಾತ್ರ ಸಾಹಿತ್ಯ ಬರೆಯುವವರ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯದಲ್ಲಿ 10ನೇ ಶತಮಾನದಿಂದ 21ನೇ ಶತಮಾನದವರೆಗೆ ಜಾತಿ ನಿರಾಕರಣೆ ಮಾಡುತ್ತಲೇ ಸಾಹಿತ್ಯವನ್ನು ವಿಸ್ತರಿಸುವ ಕೆಲಸ ಮಾಡಲಾಗುತ್ತಿದ್ದರೂ ಸಹ ಜಾತೀಯತೆ ಮತ್ತಷ್ಟು ಕಠಿಣ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಬೆಳೆವಣಿಗೆಗಳು ಆತಂಕಕಾರಿಯಾಗಿವೆ. ಇಂದಿನ ರಾಜಕೀಯ ಪರಿಸ್ಥಿತಿ ಕುಮಾರವ್ಯಾಸರ “ಅರಸು ಮೊರೆವ ಹುಲಿ” ಎಂಬ ಹೇಳಿಕೆಯಂತೆ ಬಡವರ ಭಿನ್ನಪ್ಪವ ಕೇಳುವವರೇ ಇಲ್ಲದಂತಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಮರಣ ಸಂಚಿಕೆ ಕಲ್ಪ ಸಂಪದ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಅಶ್ವಿಜ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಗೌರವ ಕಾರ್ಯದರ್ಶಿ ಡಾ: ಡಿ.ಎನ್.ಯೋಗೀಶ್ವರಪ್ಪ, ಡಾ: ಕಂಟಲಗೆರೆ ಸಣ್ಣಹೊನ್ನಯ್ಯ, ಮುರುಳಿಕೃಷ್ಣಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಅಸ್ಗರ್ ಬೇಗ್, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ|| ಚೇತನ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಚಾಂದು, ರಾಜಶೇಖರ್, ಜಿಲ್ಲೆಯ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಪರಿಷತ್ತಿನ ದ್ವಜಾರೋಹಣವನ್ನು ನೆರವೇರಿಸಿದರು. ನಗರದ ಬಿಜಿಎಸ್ ವೃತ್ತದಿಂದ ಗಾಜಿನ ಮನೆಯವರೆಗೆ ಸಮ್ಮೇಳಾನಾಧ್ಯಕ್ಷರಾದ ಡಾ: ಆಗ್ರಹಾರ ಕೃಷ್ಣಮೂರ್ತಿ ದಂಪತಿಗಳನ್ನು ವಿವಿಧ ಕಲಾ ತಂಡಗಳಿಂದ ಮೆರವಣಿಗೆಯ ಮೂಲಕ ಕರೆತರಲಾಯಿತು.