ತುಮಕೂರಿನಶ್ರೀರಂಗರಂಗ ಹವ್ಯಾಸಿ ಕಲಾವೃಂದಟ್ರಸ್ಟ್, ಮೊರಾರ್ಜಿದೇಸಾಯಿವಸತಿ ಶಾಲೆ, ಚಿಕ್ಕನಹಳ್ಳಿ, ಸಿರಾ ಮತ್ತುಕನ್ನಡ ಮತ್ತು ಸಂಸ್ಕøತಿಇಲಾಖೆ, ಕರ್ನಾಟಕ ಸರ್ಕಾರಇವರ ಸಹಕಾರದಲ್ಲಿ 67ನೇ ಕನ್ನಡರಾಜ್ಯೋತ್ಸವ ಸಂಭ್ರಮಾಚರಣೆ ಏರ್ಪಡಿಸಿದೆ. ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ರಂಗಮಂದಿರದಲ್ಲಿ 29-11-2024 ಸಂಜೆ 4-00 ಗಂಟೆಗೆÀ‘ಜಾಗೃತಿಜೀವನ’ ನಾಟಕ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯರಂಗಕರ್ಮಿ, ಗುರು ಶ್ರೀ ಹೆಚ್ಎಂ. ರಂಗಯ್ಯಅವರು ರಚಿಸಿರುವ ನಾಟಕವನ್ನು ಎಂಕೆ. ಮೋಹನ್ಕುಮಾರ್ ನಿರ್ದೇಶಿಸಿದ್ದಾರೆ.
‘ಜಾಗೃತಿಜೀವನ’ ನಾಟಕ ಸ್ವಚ್ಛತೆ, ನೀರು, ನೈರ್ಮಲ್ಯ, ಹೆಣ್ಣು ಭ್ರೂಣಹತ್ಯೆ, ಮತ್ತು ಬಾಲ್ಯ ವಿವಾಹ ಕುರಿತು ಮಾತನಾಡುತ್ತದೆ. ಕಳೆದ ಶತಮಾನದಿಂದಈವರೆಗೂ ಸರ್ಕಾರ ಹಾಗೂ ಸಾರ್ವಜನಿಕ ವಿದ್ಯಾವಂತ ಬುದ್ಧಿವಂತರುಕೈಗೊಂಡಅರಿವಿನ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯುತ್ತಿವೆ. ಆದರೂ ಸಾಮಾನ್ಯಜನರಲ್ಲಿಜಾಗೃತಿಉಂಟಾಗಿಯೇಇಲ್ಲ!? ನೋಡಿದರೇ ತಿಳಿಯುತ್ತದೆ. ಪ್ರಧಾನ ಮಂತ್ರಿಗಳು, ಮುಖ್ಯ ಮಂತ್ರಿಗಳು ಅಧಿಕಾರಿಗಳು ತಾವೇ ಬೀದಿಗೆ ಬಂದುಕಾರ್ಯೋನ್ಮುಖರಾಗಿ ಪೊರಕೆ, ಬಕೀಟು, ಭಾಷಣ ಮಾಡಿದರುಜಾಗೃತರಾಗಿಲ್ಲ? ಕೇಳಿಸಿದರೂ ಕೇಳಿಸಿಯೇ ಇಲ್ಲವೆಂದು ಮುಖ ತಿರುಗಿಸಿಕೊಂಡೇ ನಡೆಯುವಜನರಿಗೆ ಹೇಗೆ ಮನವರಿಕೆ ಮಾಡಬೇಂಬುದೇ ಬಹುದೊಡ್ಡ ಪ್ರಶ್ನೆಯಾಗಿರುವಾಗ ಹೊಣೆಗಾರರುಯಾರು?!
ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ 2003 ರಿಂದಈವರೆಗೂಊರೂರು, ಬೀದಿ-ಬೀದಿಗಳಲ್ಲಿ ಎಷ್ಟೇ ಅಲೆದರೂ ಮಾಡಲು ಕೆಲಸವಿಲ್ಲ; ಜೊತೆಗೆ ಸರ್ಕಾರ ಹಣಕೊಡುತ್ತದೆಎಂದು ಹೀಯಾಳಿಸುವವರೇ ಹೆಚ್ಚು. ಈ ದಿನಗಳಲ್ಲಿಯೂ ಚೊಂಬು ಹಿಡಿದು ಬಯಲಿಗೆ ಹೋಗುವವರೇ ಹೆಚ್ಚು. ಹೆಣ್ಣು ಭ್ರೂಣಹತ್ಯೆ ಮಾಡಬೇಡಿಎಂದು ಎಷ್ಟೇ ಗೋಗರೆದರೂ ಕೇಳದ ಜನ ಸ್ಕ್ಯಾನಿಂಗ್ ಮುಂದೆ ಸಾಲು ಸಾಲು? ಬಾಲ್ಯ ವಿವಾಹ ಒಳ್ಳೇದಲ್ಲ ಎಂದು ಹೇಳಿದರೂ ಕೇಳದ ಜನಕಣ್ಣುಮುಚ್ಚಿತೆರೆಯುವಷ್ಟರಲ್ಲಿ ತಾಳಿ ಕಟ್ಟಿಸಿಕೊಂಡು ಬೀಗುವ ಜನರಿಗೇನುಗೊತ್ತು? ನಮ್ಮ ಮಕ್ಕಳು ಹದಿ-ಹರೆಯದರಲ್ಲಿಯೇ ರೋಗರುಜಿನಗಳಿಗೆ ಬಲಿಯಾಗುವರೆಂದು? ಸರ್ಕಾರ ಎಷ್ಟೇ ಬಿಗಿಯಾಗಿ ಕಾನೂನು ಮಾಡಿದರೂ ಮಾಡಿದವರಿಗೇ ಬುದ್ಧಿ ಹೇಳುತ್ತಾರೆ ನಮ್ಮಜನ!
ಇಂತಹ ನೈಜ ಘಟನೆಗಳನ್ನಾಧರಿಸಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗಾದರೂ ಈ ವಿಷಯ ಮನವರಿಕೆ ಮಾಡಿಕೊಡುವ ಸದುದ್ದೇಶದಿಂದ ಮತ್ತೆ ಶ್ರೀ ರಂಗರಂಗ ಪಟ್ಟು ಬಿಡದೆ‘ಜಾಗೃತಿಜೀವನ’ ನಾಟಕ ಪ್ರಯೋಗ ಮಾಡಲು ಮುಂದಾಗಿದೆ. ಚಿಕ್ಕನಹಳ್ಳಿಯ ಸುತ್ತಮುತ್ತಲಿನ ಹಳ್ಳಿಯ ಬಂಧುಗಳು ಬಂದು ನಾಟಕ ನೋಡಿ ಪ್ರೋತಾಹಿಸಿ.
ಈ ನಾಟಕ ಪ್ರಯೋಗವನ್ನು ಶ್ರೀ ಜಗದೀಶಕಣಕಾಲ, ಪ್ರಾಂಶುಪಾಲರು, ಮೊರಾರ್ಜಿದೇಸಾಯಿ ವಸತಿ ಶಾಲೆ, ಚಿಕ್ಕನಹಳ್ಳಿ ಸಿರಾ ಇವರುಉದ್ಘಾಟಿಸಲಿದ್ದಾರೆ. ತುಮಕೂರಿನಕನ್ನಡ& ಸಂಸ್ಕøತಿಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಈಶ್ವರ ಕೆ. ಮಿರ್ಜಿ, ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅಧ್ಯಕ್ಷತೆಯನ್ನುಗುರು ಶ್ರೀ ಹೆಚ್.ಎಂ. ರಂಗಯ್ಯ, ರಂಗಕರ್ಮಿ, ಶ್ರೀ ರಂಗರಂಗ ಹವ್ಯಾಸಿ ಕಲಾವೃಂದದ ಮುಖ್ಯ ಟ್ರಸ್ಟಿ ವಹಿಸುವರು, ಅಧ್ಯಾಪಕರು, ಸಿಬ್ಬಂಧಿಗಳು ಎಂಡಿಆರ್ಎಸ್ ಚಿಕ್ಕನಹಳ್ಳಿ, ಸದಸ್ಯ ಟ್ರಸ್ಟಿಗಳು, ಸದಸ್ಯಕಲಾವಿದರು, ಹಾಗೂ ರಂಗಾಸಕ್ತ ಸಾರ್ವಜನಿಕ ಬಂಧುಗಳು ಭಾಗವಹಿಸುವರು.