ತುಮಕೂರಿನ ಮರಳೂರಿನಲ್ಲಿರುವ ವಾಲ್ಮೀಕಿ ಭವನದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಹಿತಿ ಡಾ. ರಾಧಕೃಷ್ಣ ಪಲ್ಲಕ್ಕಿ, ಬಿ. ತಿಪ್ಪೇಸ್ವಾಮಿ, ಅನಿಲ್ಕುಮಾರ್, ನಾಗರಾಜು ಗಾಣದಹುಣಸೆ, ಎಂ.ಎನ್. ನಾಗರಾಜು ಮರಳೂರು ರವರನ್ನು ಸನ್ಮಾನಿಸಲಾಯಿತು. ಶ್ರೀ ಸಂಜಯ ಕುಮಾರ ಸ್ವಾಮೀಜಿ, ಸಾಮಾಜಿಕ ಹೋರಾಟಗಾರ ಹಾಗೂ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ರಾಜ್ಯಾಧ್ಯಕ್ಷ ಮಾರಣ್ಣ ಪಾಳೇಗಾರ್, ಆರ್. ನಾಗರಾಜು ಮರಳೂರು, ಭರತ್ ರಾಜ್, ಅಂಜಿನಾಯಕ್ ಮತ್ತಿತರರು ಚಿತ್ರದಲ್ಲಿದ್ದಾರೆ.