ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಚ ಭಾರತ ಅಭಿಯಾನದಡಿ ತುಮಕೂರು ನಗರವನ್ನು 3 Star ಬಯಲು ಶೌಚ ಮುಕ್ತ+ (ಓ.ಡಿ.ಎಫ್+) ನಗರವೆಂದು ಕಳೆದ ಸಾಲಿನಲ್ಲಿ ಘೋಷಿಸಿ ಪ್ರಮಾಣೀಕರಿಸಿದೆ.
ಪ್ರಸ್ತುತ ಪಾಲಿಕೆಯು ನಗರವನ್ನು ಬಯಲು ಶೌಚಮುಕ್ತ+ ನಗರದಿಂದ “5 Star” ಬಯಲು ಶೌಚಮುಕ್ತ++ (ಓ.ಡಿ.ಎಫ್++) ನಗರವೆಂದು ಘೋಷಿಸಿ ಉನ್ನತೀಕರಿಸಲು ಉದ್ದೇಶಿಸಿದ್ದು, “5 Star” ಬಯಲು ಶೌಚಮುಕ್ತ++ (ಓ.ಡಿ.ಎಫ್++) ನಗರವೆಂದು ಘೋಷಿಸುವ ಬಗ್ಗೆ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಸಾರ್ವಜನಿಕರು ನವೆಂಬರ್ 22ರೊಳಗಾಗಿ ಮಹಾನಗರಪಾಲಿಕೆ ಆಯುಕ್ತರ ಕಚೇರಿಗೆ ಸಲ್ಲಿಸಬಹುದೆಂದು ಆರೋಗ್ಯಾಧಿಕಾರಿ ವೀರೇಶ್ ಕಲ್ಮಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.