ಕರ್ನಾಟಕ ಅಂಧರ ಕ್ರೀಡಾ ಸಂಘ , ಸಮರ್ಥನಂ ಅಂಗವಿಕಲ ಸಂಸ್ಧೆ ಮತ್ತು ಭಾರತ ಅಂಧರ ಕ್ರೀಡಾ ಸಂಘ ಸಹಯೋಗದೊಂದಿಗೆ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು 27ರದು ತುಮಕೂರು ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ನಲ್ಲಿ ಆಯೋಜಿಸಿದ್ದಾರೆ .
ಕ್ರೀಡಾಕೂಟವು ಬೆಳಗ್ಗೆ 8:00 ಯಿಂದ ಸಂಜೆ 5 ದರವರೆಗೂ ನಡೆಯಲಿದ್ದು , ಈ ಕ್ರೀಡಾಕೂಟದಲ್ಲಿ 19 ವಯಸ್ಸಿನ ಮೇಲ್ಪಟ್ಟ ಎಲ್ಲಾ ಅಂಧ ಮತ್ತು ಕಡಿಮೆ ದೃಷ್ಟಿ ಇರುವ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು.
ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ಗುಜರಾತ್ ನಲ್ಲಿ ನಡೆಯಲಿರುವ 23ನೆಯ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕರ್ನಾಟಕವನ್ನು ಪ್ರತಿನಿಧಿಸುವ ಸೌಲಭ್ಯ ಕೂಡ ದೊರೆಯಲಿದೆ.
ಈ ಒಂದು ಕ್ರೀಡಾಕೂಟದಲ್ಲಿ ಬಹುಮಾನ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯದ ಗೃಹ ಇಲಾಖೆಯ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಹಾಗೂ ಡಾ. ಮಹಾಂತೇಶ್ ಜಿ ಕೆ ಸಮರ್ಥನಂ ಅಂಗವಿಕಲ ಸಂಸ್ಧೆಯ ಸಂಸ್ಥಾಪಕರು ಕೂಡ ಭಾಗವಹಿಸಲಿದ್ದಾರೆ .
ಕ್ರೀಡಾಕೂಟಕ್ಕೆ ನೋಂದಾಯಿಸಿಕೊಳ್ಳಲು ಸಂಪರ್ಕಿಸಿ – Shiಞಚಿ Sheಣಣಥಿ-ಉeಟಿeಡಿಚಿಟ Seಛಿಡಿeಣಚಿಡಿಥಿ, ಏಃSಂ: 9916136216 / 9480809588, ಃhಚಿsಞಚಿಡಿ: 8660976034