ಸಾಹೇ ವಿಶ್ವ ವಿದ್ಯಾನಿಲಯ ಹಾಗೂ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ ಕಾಲೇಜುಗಳ ಮಹಿಳಾ ಹಾಗೂ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ಡಿಸೆಂಬರ್ 26 ಹಾಗೂ 27 ರಂದು ಎಸ್.ಎಸ್.ಐ.ಟಿಕಾಲೇಜ್ ಕ್ಯಾಂಪಸ್ ಆವರಣದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.
ಈ ವೇಳೆ ಎಸ್ಎಸ್ಐಟಿ ದೈಹಿಕ ಶಿಕ್ಷಣ ನಿರ್ದೇಶಕ ರುದ್ರೇಶ್ ಮಾತನಾಡಿ ದೇಶ-ವಿದೇಶ ಮಟ್ಟದಲ್ಲಿ ಮನೆತಾದ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು ಕ್ರೀಡಾಪ್ರಿಯರಾದ ಡಾ.ಜಿ.ಪರಮೇಶ್ವರ್ಅವರ ಆಶಯದಂತೆ ರಾಜ್ಯ ಮಟ್ಟದ ಅಂತರ್ಕಾಲೇಜ್ ಮಟ್ಟದ ವಾಲಿಬಾಲ್ ಪಂದ್ಯವಾಳಿಗಳನ್ನು ಆಯೋಜನೆ ಮಾಡಿದ್ದು ಈ ಪಂದ್ಯಾವಳಿಗೆ ಹಾಸನ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಗಳೂರು, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 16 ಬಾಲಕರ ತಂಡ ಹಾಗೂ 8 ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲ್ಲಿ ಭಾಗವಹಿಸುತ್ತವೆ, ಬರುವ ಆಟಗಾರರರಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆಎಂದು ತಿಳಿಸಿದರು.
ದೈಹಿಕ ಶಿಕ್ಷಣದ ವಿಭಾಗದ ದೈಹಿಕ ನೇತೃತ್ವದಲ್ಲಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪಂದ್ಯಾವಳಿಗೆ ವಾಲಿಬಾಲ್ ಮೈದಾನವನ್ನು ಸಜ್ಜುಗೊಳಿಸಲಾಗಿದೆ, ಅಂತರ್ಕಾಲೆಜು ವಾಲಿಬಾಲ್ ಪಂದ್ಯಾವಳಿಯನ್ನು ರಾಜ್ಯದ ಗೃಹ ಸಚಿವರು ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜಿ ಪರಮೇಶ್ವರ್ ಅವರು ಉದ್ಘಾಟನೆ ಮಾಡಲಿದ್ದು, ಮುಖ್ಯ ಅಥಿತಿಗಳಾಗಿ ತುಮಕೂರಿನ ಜಿಲ್ಲಾಧಿಕಾರಿಗಳಾದ ಶುಭಾಕಲ್ಯಾಣ್, ಸಾಹೇ ವಿವಿ ಉಪಕುಲಪತಿಗಳಾದ ಡಾ.ಕೆ,ಬಿ.ಲಿಂಗೇಗೌಡ, ಕುಲಸಚಿವರಾದ ಎಂ.ಜೆಡ್.ಕುರಿಯನ್, ಕುಲಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಪರೀಕ್ಷಾಂಗದ ವಿಭಾಗದ ಮುಖ್ಯಸ್ಥರಾದ ಗುರುಶಂಕರ್, ಎಸ್ಎಸ್ಐಟಿ ಪ್ರಾಂಶುಪಾಲರಾದ ರವಿಪ್ರಕಾಶ್ ಸೇರಿದಂತೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು ಆಗಮಿಸಲಿದ್ದು ಸಾಹೇ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಶಶಿ ಕುಮಾರ್, ಕ್ರೀಡಾ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿ ವೃಂದದವರು ಪಂದ್ಯವಳಿಯಲ್ಲಿ ಉಪಸ್ಥಿತಿ ಇರಲಿದ್ದಾರೆ.