ಇಂದಿನ ದಿನಮಾನಸದಲ್ಲಿ ಆರೋಗ್ಯವು ಬಹಳ ಮುಖ್ಯವಾಗಿದೆ. ಏಕೆಂದರೆ ಇಂದು ಹದಿಹರೆಯದ ವಯಸ್ಸಿಗೆ ಹೃದಯಾಘಾತದಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅಲ್ಲದೇ ಇಂತಹ ಕಾಯಿಲೆಗಳಿಂದ ನವಯುವಕರು ಮರಣ ಹೊಂದುತ್ತಿದ್ದಾರೆ. ಆದ್ದರಿಂದ ಇಂದು ನಾವು ಆರೋಗ್ಯದ ಕಡೆ ಅತಿಹೆಚ್ಚು ಗಮನವನ್ನು ಹರಿಸಬೇಕಿದೆ. ಆದ್ದರಿಂದ ಮಧುಮೇಹ, ರಕ್ತದೊತ್ತಡ, ಹೃದಯಾಘಾತದಂತಹ ಸಮಸ್ಯೆಗಳಿಗೆ ಸುಲಭ ಪರಿಹಾರೋಪಾಯಗಳೇ ನಡಿಗೆ. ಸಾಮಾನ್ಯ ಜನರು ಈ ನಡಿಗೆಯನ್ನು ಪ್ರತಿನಿತ್ಯ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಶುದ್ಧವಾದ ಗಾಳಿಯು ಇಂದು ನಗರ ಪ್ರದೇಶಗಳಲ್ಲಿ ಸಿಗುವುದು ಅಸಾಧ್ಯ ಆದ್ದರಿಂದ ಸಾರ್ವಜನಿಕರು ಇಂತಹ ಸಣ್ಣ ಪರಿಹಾರೋಪಾಯಗಳಿಗೆ ನಗರದಲ್ಲಿರುವ ಪಾರ್ಕ್ಗಳಿಗೆ ಮೊರೆ ಹೋಗಿದ್ದಾರೆ. ಅಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಅಂದರೆ ತಕ್ಕಮಟ್ಟಿಗೆ ಶುದ್ಧವಾದ ಗಾಳಿಯು ಅಲ್ಲಿ ಸಿಗುವುದಂತೂ ಸತ್ಯ ಆದ್ದರಿಂದ ಅವುಗಳ ಮೊರೆ ಹೋಗಿದ್ದಾರೆ. ಆದರೆ ಅಂತಹ ಪ್ರದೇಶಗಳನ್ನೇ ಮಲಿನ ಮಾಡಿದರೆ ಸಾರ್ವಜನಿಕರು ಎಲ್ಲಿಗೆ ಹೋಗಬೇಕು? ಎಂಬುದು ಪ್ರಶ್ನೆಯಾಗುತ್ತದೆ.
ಪಾರ್ಕ್ ಎಂದರೆ ಅಲ್ಲಿ ಹಸುಗೂಸಿನಿಂದ ಹಿಡಿದು ಮುದಿವಯಸ್ಸಿನವರೆಗೂ ಅಲ್ಲಿ ಸಮಯ ಕಳೆಯಲು ಅಥವಾ ತಮ್ಮ ಆರೋಗ್ಯದ ದೃಷ್ಟಿಯಿಂದಲೋ ಬಂದಿರುತ್ತಾರೆ. ಅಂತಹ ಪ್ರದೇಶಗಳಲ್ಲಿ ಸೆಪ್ಟಿಕ್ ಟ್ಯಾಂಕ್ಗಳನ್ನು ನಿರ್ಮಿಸುವುದು ಎಷ್ಟು ಸರಿ. ಅಲ್ಲದೇ ಲೇಔಟ್ನ ಮಾಲೀಕರೊಂದಿಗೆ ಶಾಮೀಲಾಗಿ ಅಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಸೆಪ್ಟಿಕ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡಿದಂತ ಲೇಔಟ್ಗಳನ್ನು ಅನುಮೋದಿಸಿ ಇ-ಖಾತಗಳನ್ನು ನೀಡಿರುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ನಮ್ಮಲ್ಲಿ ಕಡಿವಾಣ ಯಾವಾಗ? ಎಂಬುದನ್ನು ಯೋಚಿಸಬೇಕಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು. ಅಲ್ಲದೇ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಸೆಪ್ಟಿಕ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡುವುದು ಕಾನೂನಿಗೆ ವಿರುದ್ದವಾಗಿದೆ.
ಆದರೆ ಇಲ್ಲಿ ಅಧಿಕಾರಿಗಳು ಮತ್ತು ಲೇಔಟ್ನ ಮಾಲೀಕರು ಒಳಗೊಳಗೆ ಒಪ್ಪಂದಗಳನ್ನು ಮಾಡಿಕೊಂಡು ಸಾರ್ವಜನಿಕ ಸ್ಥಳವಾದ ಮಧುಗಿರಿಯ ಗೌರಿಬಿದನೂರು ರಸ್ತೆ ಯಲ್ಲಿನ ಬೈಪಾಸ್ ಪಕ್ಕದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬಡಾವಣೆಗಳ ಪಾರ್ಕ್ಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪರಿಶೀಲಿಸಿ ಇಂತಹ ಚಟುವಟಿಕೆಗಳಿಗೆ ಮುಂದಾಗಿರುವ ಅಧಿಕಾರಿಗಳಿಗೆ ಮತ್ತು ಲೇಔಟ್ನ ಮಾಲೀಕರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ಅಲ್ಲದೇ ಆ ಟ್ಯಾಂಕ್ಗಳನ್ನು ತೆರವುಗೊಳಿಸಿ ಪಾರ್ಕ್ಗಳನ್ನು ಮಲಿನಗೊಳಿಸದೆ, ಸಾರ್ವಜನಿಕರಿಗೆ ಶುದ್ಧಗಾಳಿ, ಉತ್ತಮ ವಾತಾವರಣ ಕಲ್ಪಿಸಿಕೊಡಲು ಮಾನವ ಹಕ್ಕು ಆಯೋಗದಿಂದ ಸ್ಥಳ ಪರಿಶೀಲನೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಪಾರ್ಕ್ಗಳಲ್ಲಿ ಸೆಪ್ಟಕ್ ಟ್ಯಾಂಕ್ ಮಾಡಿದ್ದರೂ ಲೇಔಟ್ಗಳನ್ನು ಅನುಮೋದನೆ ಮಾಡಿ ಇ-ಖಾತಗಳನ್ನು ಮಾಡಿದ ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಮತ್ತು ಕಂದಾಯ ಅಧಿಕಾರಿ ವಸಂತಕುಮಾರಿ ಹಾಗೂ ಮಧುಗಿರಿ ಪುರಸಭೆಯ ಇಂಜಿನಿಯರ್ ಪ್ರಶಾಂತ್ ರವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಮಾತುಗಳು ಪ್ರಜ್ಞಾವಂತರಿಂದ ಕೇಳಿಬರುತ್ತಿವೆ. ಇದರ ಬಗ್ಗೆ ಉನ್ನತ ಅಧಿಕಾರಿಗಳು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ.