ತುಮಕೂರಿನ ಕೆ.ಆರ್. ಬಡಾವಣೆಯಲ್ಲಿ ವಾಸವಾಗಿದ್ದ ಶ್ರೀಮತಿ ಗಾಯತ್ರಿ ಎಂ.ಕೆ. (69 ವರ್ಷ) ದಿನಾಂಕ 23-11-2024 ರಂದು ನಿಧನರಾದರೆಂದು ತಿಳಿಸಲು ವಿಷಾಧಿಸಲಾಗುವುದು.
ಅವರ ಕುಟುಂಬದವರು ನೋವಿನ ಸಂದರ್ಭದಲ್ಲಿಯೂ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪರಮಾತ್ಮ ಕೊಡಲಿ ಎಂದು ಪ್ರಾರ್ಥಿಸುತ್ತೇವೆ.
ಈ ಎರಡು ನೇತ್ರಗಳನ್ನು ಎನ್.ಎಸ್.ಐ ಫೌಂಡೇಶನ್ ಮುಖ್ಯಸ್ಥರಾದ ನಾಗದೀಶ್ ಎನ್.ಎಸ್. ರವರ ಸಹಕಾರದಿಂದ ಬೆಂಗಳೂರಿನ ಲಯನ್ಸ್ ಇಂಟರ್ನ್ಯಾಷನಲ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಈ ಕಾರ್ಯದಿಂದ ಇಬ್ಬರು ದೃಷ್ಠಿಹೀನರಿಗೆ ದೃಷ್ಠಿ ಕೊಟ್ಟಂತಾಗಿ ಪಡೆದ ಭಾಗ್ಯವಂತರು ಫೌಂಡೇಷನ್ನಿನ ಸದಸ್ಯರುಗಳು ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತಾರೆ.
ಇದೇ ರೀತಿ ತುಮಕೂರು ಜಿಲ್ಲೆಯಲ್ಲಿ ನೇತ್ರದಾನ ಮಾಡುವವರು ನಾಗದೀಶ್ ಎನ್.ಎಸ್. ಮುಖ್ಯಸ್ಥರು, ಎನ್.ಎಸ್. ಐ ಫೌಂಡೇಶನ್, ಎನ್.ಎಸ್. ಪೈಂಟ್ಸ್ & ಹಾರ್ಡ್ವೇರ್, ಜೆ.ಸಿ. ರಸ್ತೆ, ಮಂಡಿಪೇಟೆ ಸರ್ಕಲ್, ತುಮಕೂರು ಮೊ :+919590066066 ಸಂಪರ್ಕಿಸಬೇಕೆಂದು ಕೋರಲಾಗಿದೆ.